ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿಯ ಗುರುತು ಪತ್ತೆಗೆ ಪೊಲೀಸರ ಮನವಿ

Published 3 ಮೇ 2024, 5:46 IST
Last Updated 3 ಮೇ 2024, 5:46 IST
ಅಕ್ಷರ ಗಾತ್ರ

ಕನಕಪುರ: ಅಪರಿಚಿತ ವ್ಯಕ್ತಿಯೊಬ್ಬರು ಸಾತನೂರು ಗ್ರಾಮದಲ್ಲಿ ಪೊಲೀಸರಿಗೆ ಸಿಕ್ಕಿದ್ದು ಅವರ ಸಂಬಂಧಿಕರು ಗುರುತು ಪತ್ತೆಹಚ್ಚಿ ಕರೆದುಕೊಂಡು ಹೋಗಬೇಕೆಂದು ಸಾತನೂರು ಪೊಲೀಸರು ಮನವಿ ಮಾಡಿದ್ದಾರೆ.

ಒಂದು ವಾರದ ಹಿಂದೆ ಸುಮಾರು 50 ವರ್ಷ ವ್ಯಕ್ತಿಯೊಬ್ಬರು ರಾತ್ರಿ ಠಾಣೆಯ ಮುಂಭಾಗದಲ್ಲಿ ಮಲಗಿದ್ದರು. ಕುರುಚಲು ಗಡ್ಡಬಿಟ್ಟಿದ್ದು ಕೊಳೆಯ ಬಟ್ಟೆಗಳನ್ನು ಧರಿಸಿದ್ದರು. ಕನ್ನಡದಲ್ಲಿ ಮಾತನಾಡುತ್ತಿದ್ದು ಅವರ ಪರಿಚಯವನ್ನು, ವಿಳಾಸವನ್ನು ತಿಳಿಸಿಲ್ಲ. ಮರು ದಿನ ಸಾತನೂರು ಗ್ರಾಮದ ಪೆಟ್ಟಿಗೆ ಅಂಗಡಿಯ ಮುಂಭಾಗದಲ್ಲಿ ಮಲಗಿ ಬೆಳಿಗ್ಗೆ ಠಾಣೆಯ ಕಡೆಗೆ ಬಂದಿದ್ದರು.

ಅದನ್ನು ಗಮನಿಸಿದ ಪೊಲೀಸರು ಅವರಿಗೆ ಉಪಚರಿಸಿದ್ದಾರೆ. ಅಪರಿಚಿತ ವ್ಯಕ್ತಿಯು ತಮ್ಮ ಹೆಸರನ್ನು ನಾರಾಯಣ ಎಂದು ಹೇಳಿದ್ದಾರೆ.  ಈ ವ್ಯಕ್ತಿಯ ಸಂಬಂಧಿಕರು ಇದ್ದರೆ ಸಾತನೂರು ಪೊಲೀಸ್‌ ಠಾಣೆಗೆ ಭೇಟಿ ನೀಡಿ ಅವರನ್ನು ಕರೆದುಕೊಂಡು ಹೋಗುವಂತೆ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT