ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ‘ಪ್ರತಿಭೆ ಯಾವುದೇ ಜಾತಿಯ ಸ್ವತ್ತಲ್ಲ’: ಬಂಡೇಮಠದ ಮಹಾಲಿಂಗ ಸ್ವಾಮೀಜಿ

Published 27 ಸೆಪ್ಟೆಂಬರ್ 2023, 5:01 IST
Last Updated 27 ಸೆಪ್ಟೆಂಬರ್ 2023, 5:01 IST
ಅಕ್ಷರ ಗಾತ್ರ

ಮಾಗಡಿ: ಸೋಲೂರು ಹೋಬಳಿ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಕಂಚುಗಲ್ ಬಂಡೇಮಠದ ಎಸ್.ಎಂ.ಎಸ್.ಶಾಲೆಯ ಆವರಣದಲ್ಲಿ ಮಂಗಳವಾರ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಕಂಚುಗಲ್ ಬಂಡೇಮಠದ ಅಧ್ಯಕ್ಷ ಮಹಾಲಿಂಗ ಸ್ವಾಮೀಜಿ, ಪ್ರತಿಭಾ ಕಾರಂಜಿ ಕಾರ್ಯಕ್ರಮ ಮಕ್ಕಳಲ್ಲಿನ ಹುದುಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಹೊರತೆಗೆಯುವ ರಹದಾರಿಗಳಾಗಲಿ. ಪ್ರತಿಭೆ ಎಂಬುದು ಒಂದು ಜಾತಿ, ಧರ್ಮದವರ ಸ್ವತ್ತಲ್ಲ. ಗ್ರಾಮೀಣ ಭಾಗದಲ್ಲಿ ಪ್ರತಿಭಾವಂತ ಮಕ್ಕಳಿದ್ದಾರೆ. ಅವರಿಗೆ ಅವಕಾಶ ಒದಗಿಸಿಕೊಡಬೇಕು ಎಂದರು.

‌ಶಿಕ್ಷಣ ಸಂಯೋಜಕ ಗಂಗಾಧರ್ ಮಾತನಾಡಿ, ನಮಗೆ ಚೇತನವನ್ನು ನೀಡಿರುವ ತತ್ವವೂ ನಮ್ಮ ಒಳಗೂ ಹೊರಗೂ ಇದ್ದು, ಅದು ಅಮರವಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಡಲು ಪ್ರತಿಭಾ ಕಾರಂಜಿ ಆಯೋಜಿಸಲಾಗಿದೆ ಎಂದರು.

ಕಂಚುಗಲ್ ಬಂಡೇಮಠದ ಮುಖ್ಯಶಿಕ್ಷಕ ಶಿವಕುಮಾರಸ್ವಾಮಿ ಮಾತನಾಡಿ, ಮಕ್ಕಳಲ್ಲಿನ ಸಾಂಸ್ಕೃತಿಕ ಅನನ್ಯತೆಯನ್ನು ಗುರುತಿಸಿ ಬೆಂಬಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮನುಷ್ಯ- ಪ್ರಕೃತಿ, ಸತ್ಯ ಎಂಬ ಸಂಬಂಧವಿರಬೇಕು. ಮಕ್ಕಳಲ್ಲಿ ಕಲಿಕೆಯ ಮೂಲಕ ಸತ್ಯದೆಡೆಗೆ ಕೊಂಡೊಯ್ಯುವಂತಾಗಬೇಕು ಎಂದರು.

ಸೋಲೂರು ಹೋಬಳಿ ಸಿಆರ್‌ಪಿಗಳಾದ ಕನ್ಯಾಕುಮಾರಿ, ಶಾರದಾ, ಬಸವರಾಜು, ಜಗದೀಶ್, ಚಂದ್ರೇಗೌಡ, ಬಂಡೇಮಠದ ಆಡಳಿತ ಮಂಡಳಿಯ ಜಗದೀಶ್, ರಮೇಶ್, ಅರಿಶಿನಕುಂಟೆ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ವೀಣಾ, ಲಕ್ಕೇನಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಕಮಲಾಬಾಯಿ, ಎಸ್,ಎಂ,ಎಸ್.ಶಾಲೆಯ ಪುಷ್ಪಾ, ಸಹಶಿಕ್ಷಕರಾದ ಗುರುಮೂರ್ತಿ ಮಾತನಾಡಿದರು.‌

ಸಹಶಿಕ್ಷಕರಾದ ರಾಜಣ್ಣ, ಪುಷ್ಪಕಲಾ, ಸಿದ್ದಗಂಗಯ್ಯ, ಮಮತಾ, ಶಿವಕುಮಾರ್, ಶಶಿಕಲಾ, ದಿವ್ಯಾ, ಚಂದನ್, ಕಾಂತರಾಜ್, ಬಸವರಾಜು, ಗೋವಿಂದರಾಜು, ರವಿಕುಮಾರ್, ನರಸಿಂಹಮೂರ್ತಿ ಹಾಗೂ ಹೋಬಳಿಯ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT