ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಪ್ರಾಥಮಿಕ ಶಾಲೆ ಆರಂಭ

ಶೈಕ್ಷಣಿಕ ಚಟುವಟಿಕೆಗೆ ಪೂರ್ಣ ಪ್ರಮಾಣದ ಚಾಲನೆ
Last Updated 25 ಅಕ್ಟೋಬರ್ 2021, 6:54 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಾದ್ಯಂತ ಸೋಮವಾರದಿಂದ ಕಿರಿಯ ಪ್ರಾಥಮಿಕ ಶಾಲೆಗಳು ಬಾಗಿಲು ತೆರೆಯಲಿದ್ದು, 1ರಿಂದ 5ನೇ ತರಗತಿಗಳಲ್ಲಿ ಪಾಠ ಆರಂಭ ಆಗಲಿದೆ. ಇದಕ್ಕಾಗಿ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ಜಿಲ್ಲೆಯಲ್ಲಿ ಸದ್ಯ ಒಟ್ಟು 1,381 ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ 1,236 ಸರ್ಕಾರಿ, 27 ಅನುದಾನಿತ ಹಾಗೂ 118 ಖಾಸಗಿ ಶಾಲೆಗಳು ಸೇರಿವೆ. ಕೋವಿಡ್ ಸೋಂಕಿನ ಕಾರಣಕ್ಕೆ ಕಿರಿಯ ವಯಸ್ಸಿನ ಚಿಣ್ಣರಿಗೆ ಕಳೆದ ಎರಡು ವರ್ಷದಿಂದ ಶಾಲೆ ನಡೆದಿಲ್ಲ.

ಕಳೆದ ವರ್ಷ ಪೂರ್ತಿ ಆನ್‌ಲೈನ್ ತರಗತಿಯಲ್ಲೇ ವಿದ್ಯಾರ್ಥಿಗಳು ಕಾಲ ಕಳೆದಿದ್ದರು. ಈ ವರ್ಷ ಅಕ್ಟೋಬರ್ ಅಂತ್ಯದಲ್ಲಿ ತರಗತಿಗಳು ಆರಂಭ ಆಗುತ್ತಿವೆ. ಈಗಾಗಲೇ, 6ರಿಂದ 10ನೇ ತರಗತಿ ವಿದ್ಯಾರ್ಥಿಗಳು ಶಾಲೆಗಳಲ್ಲಿ ಓದುತ್ತಿದ್ದು, ಕಿರಿಯರಿಗೆ ಸಾಥ್ ನೀಡಲಿದ್ದಾರೆ.

ಇದೇ 25ರಿಂದ 30ರವರೆಗೆ ಎಲ್ಲಾ ಶಾಲೆಗಳಲ್ಲೂ 1 ರಿಂದ 5ನೇ ತರಗತಿಗಳಿಗೆ ಅರ್ಧದಿನ ಭೌತಿಕ ತರಗತಿಗಳು ನಡೆಯಲಿವೆ. ನ. 2ರಿಂದ ಬೆಳಿಗ್ಗೆ 10ರಿಂದ 4 ವರೆಗೆ ಪೂರ್ಣಾವಧಿ ತರಗತಿಗಳು ಇರಲಿವೆ. ಇನ್ನು ತರಗತಿಗೆ ಹಾಜರಾಗಲಿರುವ ವಿದ್ಯಾರ್ಥಿಗಳು ತಮ್ಮ ಪೋಷಕರಿಂದ ಅನುಮತಿ ಪತ್ರ ತರುವುದು ಕಡ್ಡಾಯವಾಗಲಿದೆ. ಇದರೊಟ್ಟಿಗೆ ಕಿರಿಯ ಪ್ರಾಥಮಿಕ ತರಗತಿಗಳ ವಿದ್ಯಾರ್ಥಿಗಳಿಗೆ ಭೌತಿಕ ಹಾಜರಾತಿ ಕಡ್ಡಾಯವಾಗಿಲ್ಲ.

ಸಣ್ಣ ಮಕ್ಕಳು ತರಗತಿಗೆ ಆಗಮಿಸುತ್ತಿರುವ ಕಾರಣ ಶಿಕ್ಷಕರು ಹಾಗೂ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಸಾಮಾಜಿಕ ಅಂತರ, ಸ್ಯಾನಿಟೈಸ್ ಮಾಡುವುದು, ದೈಹಿಕ ಉಷ್ಣಾಂಶ ಪರೀಕ್ಷೆ ಮೊದಲಾದ ಕ್ರಮಗಳನ್ನು ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT