ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆರೆಗಳಿಗೆ ನೀರು ಹರಿಸಲು ಒತ್ತಾಯಿಸಿ ಪ್ರತಿಭಟನೆ

Published : 23 ಆಗಸ್ಟ್ 2024, 7:12 IST
Last Updated : 23 ಆಗಸ್ಟ್ 2024, 7:12 IST
ಫಾಲೋ ಮಾಡಿ
Comments

ಚನ್ನಪಟ್ಟಣ: ತಾಲ್ಲೂಕಿನ ಗಡಿಗ್ರಾಮದಲ್ಲಿರುವ ಎಚ್.ಡಿ. ದೇವೇಗೌಡ ಬ್ಯಾರೇಜ್‌ಗೆ ನೀರು ಹರಿಸದ ಕಾರಣ ತಾಲ್ಲೂಕಿನ ಕೆರೆಗಳು ಬರಿದಾಗಿದ್ದು, ಕೂಡಲೇ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಪದಾಧಿಕಾರಿಗಳು ಗುರುವಾರ ತಾಲ್ಲೂಕಿನ ಹೊಂಗನೂರು ಕೆರೆಯ ಕೋಡಿ ಬಳಿ ಪ್ರತಿಭಟನೆ ನಡೆಸಿದರು.

ಕೆ.ಆರ್.ಎಸ್. ಜಲಾಶಯ ತುಂಬಿ ತಮಿಳುನಾಡಿಗೆ ಸಾವಿರಾರು ಕ್ಯೂಸೆಕ್ಸ್ ನೀರು ಹರಿದುಹೋಗುತ್ತಿದ್ದರೂ ಶಿಂಷಾ ನದಿಗೆ ನೀರು ಹರಿಸಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದ ತಾಲ್ಲೂಕಿನ ಗಡಿಗ್ರಾಮದಲ್ಲಿರುವ ಎಚ್.ಡಿ. ದೇವೇಗೌಡ ಬ್ಯಾರೇಜ್‌ನಲ್ಲಿ ನೀರು ಖಾಲಿಯಾಗಿದೆ. ತಾಲ್ಲೂಕಿನ ಕೆರೆಗಳಿಗೆ ನೀರಿನ ಮೂಲವಾದ ಎಚ್.ಡಿ. ದೇವೇಗೌಡ ಬ್ಯಾರೇಜ್‌ಗೆ ಕೂಡಲೇ ನೀರು ಹರಿಸಬೇಕು, ಆನಂತರ ತಾಲ್ಲೂಕಿನಲ್ಲಿ ಖಾಲಿಯಾಗಿರುವ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ ಮಾತನಾಡಿ, ಶಿಂಷಾನದಿಗೆ ನೀರು ಹರಿಸದಿರಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಬ್ಯಾರೇಜ್ ತುಂಬದೆ ಜಿಲ್ಲೆಯ ಕೆರೆಕಟ್ಟೆಗಳು ನೀರಿಲ್ಲದೆ ಬರಿದಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಹೊಂಗನೂರು ಡೈರಿ ಸಿಇಒ ಪುಟ್ಟರಾಜು, ನಿವೃತ್ತ ಪ್ರಾಂಶುಪಾಲ ನಿಂಗೇಗೌಡ, ಗ್ರಾ.ಪಂ. ಮಾಜಿ ಅಧ್ಯಕ್ಷ ಅನಂತಕೃಷ್ಣರಾಜೇ ಅರಸು, ಮಾಜಿ ಸದಸ್ಯ ಜಮೀರ್ ಪಾಷಾ, ನಿವೃತ್ತ ಶಿಕ್ಷಕ ಮುರಳೀಧರ್, ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಬೇವೂರು ಯೋಗೀಶ್ ಗೌಡ, ಪದಾಧಿಕಾರಿಗಳಾದ ಶಿವಕುಮಾರ್, ಬಾಬು, ಪಟೇಲ್ ಸ್ವಾಮಿ, ದಿನೇಶ್ ಕುಮಾರ್, ಸಿದ್ದರಾಜು, ಕೃಷ್ಣ, ಶಿವು, ಬಿ.ನಾಗೇಶ್, ಸಿದ್ದರಾಜು, ಮಲ್ಲೇಶ್, ಮೋಹನ್ ರಾಜ್ ಅರಸ್, ಮಂಜು, ಹರೀಶ್ ರಾಜೇ ಅರಸ್, ಸೋಮಶೇಖರ್ ರಾಜೇ ಅರಸ್, ನಂಜೇಗೌಡ, ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT