ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದೂರು: ತಂಪೆರೆದ ಮಳೆರಾಯ

Published 9 ಮೇ 2024, 7:52 IST
Last Updated 9 ಮೇ 2024, 7:52 IST
ಅಕ್ಷರ ಗಾತ್ರ

ಕುದೂರು: ಬಿಸಿಲಿನ ಬೇಗೆಯಿಂದ ಬಸವಳಿದ ಪಟ್ಟಣದ ಜನತೆ ಬುಧವಾರ ಸಂಜೆ ಸುರಿದ ಮಳೆಯಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಹೋಬಳಿಯಾದ್ಯಂತ ಸಂಜೆ ಐದು ಗಂಟೆ ವೇಳೆಗೆ ಗುಡುಗು ಸಹಿತ ಸಣ್ಣಗೆ ಮಳೆ ಸುರಿಯಲಾರಂಭಿಸಿತು. ಹಲವು ದಿನಗಳಿಂದ ಹೆಚ್ಚಾದ ಬಿಸಿಲಿನ ತಾಪದಿಂದ ಪರಿತಪಿಸುತ್ತಿದ್ದ ಜನರು, ಮಳೆಯಿಂದಾಗಿ ಉಲ್ಲಾಸದ ನಗೆ ಬೀರಿದರು.

ಮಳೆಯಿಂದಾಗಿ ರೈತರ ಮೊಗದಲ್ಲಿ  ಮಂದಹಾಸ ಮೂಡಿತು. ಹಲವು ದಿನಗಳಿಂದ ರಣಬಿಸಿಲಿಗೆ ಕಾದ ಬಾಣಲಿಯಂತಾಗಿದ್ದ ಭೂಮಿಗೆ ಕೆಲ ಹೊತ್ತು ಸುರಿದ ಮಳೆಯು ತಂಪನ್ನೆರೆಯಿತು.

ರ್ಷದಲ್ಲಿ ಮೊದಲ ಬಾರಿಗೆ ಮಳೆಯ ಸಿಂಚನವಾಗಿದ್ದು, ನಾಗರಿಕರು ಹರ್ಷ ಪಟ್ಟರು. ಸಾಮಾಜಿಕ ಜಾಲತಾಣಗಳಲ್ಲಿ ಮಳೆಯ ಚಿತ್ರ ಹಾಗೂ ಮಳೆಯಲ್ಲಿ ನಿಂತ ಚಿತ್ರಗಳನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT