ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಡಕ್ಟರ್‌, ಚಾಲಕರಿಂದ ರಾಜ್ಯೋತ್ಸವ

Last Updated 25 ನವೆಂಬರ್ 2019, 14:15 IST
ಅಕ್ಷರ ಗಾತ್ರ

ಮಾಗಡಿ: ಕನ್ನಡ ಸಂಸ್ಕೃತಿಗೆ ಹಿರಿದಾದ ಅಂತಸ್ಸತ್ವವಿದೆ. ಭವ್ಯ ಪರಂಪರೆಯಿದೆ. ಅನೇಕ ಶತಮಾನಗಳ ಅವಧಿಯಲ್ಲಿ ಸುಂದರವಾದದ್ದು, ಸತ್ಯವಾದದ್ದನ್ನು ಮೈಗೂಡಿಸಿಕೊಂಡಿದೆ ಎಂದು ಸಾಹಿತಿ ಶಿವಶಂಕರ್ ತಿಳಿಸಿದರು.

ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸೋಮವಾರ ನಡೆದ ಕರ್ನಾಟಕ ರಾಜ್ಯೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಹಳೆಯದನ್ನು ಮರೆಯದೆ, ಹೊಸತನ್ನು ಅಲಕ್ಷಿಸದೆ, ಉತ್ತಮ ಅಂಶಗಳನ್ನು ತನ್ನದಾಗಿಸಿಕೊಂಡಿರುವ ಕನ್ನಡಿಗರ ಸಾಂಸ್ಕೃತಿಕ ಪರಂಪರೆಯನ್ನು ಮಕ್ಕಳಿಗೆ ಅರ್ಥೈಸುವ ಅಗತ್ಯವಿದೆ. ನೆಲೆಜಲ, ನಾಡುನುಡಿ, ಪರಂಪರೆ, ಜನಪದ, ಗೋವಿನ ಹಾಡು ರಕ್ಷಿಸಿ, ನಮ್ಮ ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡುವ ಮೂಲಕ ತಾಯಿನುಡಿಯನ್ನು ಉಳಿಸಿ, ಬಳಸಿ, ಬೆಳೆಸಲು ನಾವೆಲ್ಲರೂ ಕಂಕಣಬದ್ಧರಾಗಬೇಕಿದೆ’ ಎಂದರು.

‘ಕನ್ನಡವು ದೇಶದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದೆ. ಸಹೋದರತೆ, ಸೌಹಾರ್ದ, ಕೂಡಿಬಾಳುವ ಪರಂಪರೆ ನಮ್ಮದು. ಕಾಫಿ, ಶ್ರೀಗಂಧ, ಚಿನ್ನ, ಕಬ್ಬಿಣ ಎಲ್ಲಕ್ಕೂ ಇದು ಪ್ರಸಿದ್ಧವಾಗಿತ್ತು. ಕನ್ನಡ ನಾಡನ್ನು ಆಳಿದ ರಾಜಮನೆತನಗಳ ಗತ ವೈಭವವನ್ನು ನಮ್ಮ ಮಕ್ಕಳಿಗೆ ಕಲಿಸಿಕೊಡುವ ಮೂಲಕ ಅವರನ್ನು ವೀರರು, ತ್ಯಾಗಿಗಳು, ಪರನಾರಿ ಸಹೋದರ, ಶೂರರನ್ನಾಗಿಸಬೇಕಿದೆ‘ ಎಂದು ತಿಳಿಸಿದರು.

ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಸರ್ಕಾರಿ ಸಾರಿಗೆ ಸಂಸ್ಥೆಯ ಚಾಲಕ, ನಿರ್ವಾಹಕ ಮತ್ತು ಆಟೋ ಚಾಲಕ, ಮಾಲೀಕರ ಪಾತ್ರ ಅನನ್ಯವಾದುದು. ಸರ್ಕಾರಿ ಕನ್ನಡ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಮೂಲಕ ಭಾಷೆ ಉಳಿದರೆ ಪೂರ್ವಿಕರ ಪರಂಪರೆ ಉಳಿಯಲಿದೆ ಎಂದರು.

ಸಾವನದುರ್ಗದಿಂದ ಬೆಂಗಳೂರಿಗೆ ಚಲಿಸುವ ಸರ್ಕಾರಿ ಬಸ್ ಚಾಲಕ ಪ್ರಸನ್ನ.ಎಸ್.ಮಾತನಾಡಿ, ‘ತಾಯಿ, ತಾಯಿ ನಾಡನ್ನು ಪ್ರೀತಿಸಿ, ಗೌರವಿಸಿ, ರಕ್ಷಿಸಬೇಕಾದುದು ನಮ್ಮೆಲ್ಲರ ಹೊಣೆಯಾಗಿದೆ. ನಾಟಕ, ಚಿತ್ರಕಲೆ, ಜನಪದ ಮೂಲಗಳಿಂದ ಬಂದ ಗ್ರಾಮೀಣ ಭಾಗದ ನಾವು ಮಾತೃಭಾಷೆ ಕನ್ನಡವನ್ನು ಅನ್ನದ ಮಾರ್ಗವಾಗಿ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ’ ಎಂದರು.

ಕಂಡಕ್ಟರ್ ನರಸಿಂಹಮೂರ್ತಿ ಮಾತನಾಡಿ, ‘ನಾವು ಕನ್ನಡಿಗರು ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಬೇಕು’ ಎಂದರು.

ಶಿಕ್ಷಕ ಶಶಿಧರ್, ಸಾರಿಗೆ ಸಂಸ್ಥೆಯ ಮಹೇಶ್, ಶಿವಣ್ಣ, ಮಂಜುನಾಥ ರಾಜ್ಯೋತ್ಸವ ಬಗ್ಗೆ ಮಾತನಾಡಿದರು. ಸಿಹಿ ವಿತರಿಸಲಾಯಿತು. ಸರ್ಕಾರಿ ಬಸ್‌ಗೆ ಹೂವಿನ ಅಲಂಕಾರ ಮಾಡಿ ಕನ್ನಡ ಭಾಷೆಯಲ್ಲಿ ಜ್ಞಾನಪೀಠ ಪಡೆದಿರುವ ಕವಿಗಳ ಭಾವಚಿತ್ರಗಳಿಗೆ ಅಲಂಕಾರ ಮಾಡಿ ಪೂಜಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT