ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಉಚಿತ ಆನ್‌ಲೈನ್‌ ಮಕ್ಕಳ ಶಿಬಿರ

Last Updated 12 ಜೂನ್ 2020, 14:54 IST
ಅಕ್ಷರ ಗಾತ್ರ

ಚನ್ನಪಟ್ಟಣ: ಪಟ್ಟಣದ ಅಗಸ್ತ್ಯ ವಿಜ್ಞಾನ ಕೇಂದ್ರವು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಹನಿವೆಲ್ ಸಂಸ್ಥೆ ಸಹಯೋಗದೊಂದಿಗೆ ಉಚಿತ ಆನ್‌ಲೈನ್‌ ಮಕ್ಕಳ ಶಿಬಿರ ಏರ್ಪಡಿಸಿದೆ.

ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಯ 5 ರಿಂದ 10 ನೇ ತರಗತಿವರೆಗಿನ ಮಕ್ಕಳು ಶಿಬಿರದಲ್ಲಿ ಆನ್‌ಲೈನ್ ಶಿಬಿರದಲ್ಲಿ ಭಾಗವಹಿಸಬಹುದು. ವಾಟ್ಸ್‌ಆ್ಯಪ್‌ಗುಂಪಿನ ಮೂಲಕ ಪೋಷಕರು ಮತ್ತು ಮಕ್ಕಳಿಗೆ ಚಟುವಟಿಕೆ, ಸರಳ ಪ್ರಯೋಗಗಳೊಂದಿಗೆ ಕಲಿಕೆ ನೀಡಲಾಗುತ್ತದೆ.

ಮಣ್ಣು, ನೀರು, ಸಸ್ಯಗಳು, ಉಸಿರಾಟ, ಗಾಳಿ, ಪಕ್ಷಿಗಳು, ಬೆಳಕು, ನೆರಳು ಉಷ್ಣ, ದೇಹದ ಚಲನೆ, ಕೀಟಗಳು, ಶಬ್ದ, ಆಮ್ಲ– ಪ್ರತ್ಯಾಮ್ಲಗಳು ಮತ್ತು ಲವಣಗಳು ಈ ವಿಷಯಗಳ ಮೇಲೆ ಮಕ್ಕಳ ಚಟುವಟಿಕೆಗಳನ್ನು ನಡೆಸಲಾಗಿದೆ. ಚಟುವಟಿಕೆಯಲ್ಲಿ ಭಾಗವಹಿಸುವ ಮಕ್ಕಳಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು. ರಸಪ್ರಶ್ನೆಯನ್ನು ಏರ್ಪಡಿಸಲಾಗುತ್ತಿದೆ.

ಮಾಹಿತಿಗೆ 99168 29826, 80950 44983 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT