ರಾಮನಗರ: ನಗರದ ವಾರ್ಡ್ 22ರ ಸದಸ್ಯ ಅಜ್ಮತ್ ಉಲ್ಲಾಖಾನ್ ಪುತ್ರ ಫೈರೋಜ್ ಉಲ್ಲಾಖಾನ್ ಅವರಿಗೆ ರಾಮನಗರ ಟೌನ್ ಠಾಣೆ ಸಬ್ ಇನ್ಸ್ಪೆಕ್ಟರ್ ತನ್ವೀರ್ ಹುಸೇನ್ ಮಂಗಳವಾರ ಸಾರ್ವಜನಿಕವಾಗಿ ಥಳಿಸಿರುವ ಆರೋಪ ಕೇಳಿ ಬಂದಿದೆ. ಹಲ್ಲೆಯಿಂದಾಗಿ ಗಾಯಗೊಂಡಿರುವ ಪದವಿ ವಿದ್ಯಾರ್ಥಿ ಫೈರೋಜ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಂಜೆ 6.30ರ ಸುಮಾರಿಗೆ ಫೈರೋಜ್ ನಮಾಜ್ ಮುಗಿಸಿ ಜನತಾ ಕಾಲೊನಿ ಬಳಿ ವಾಕಿಂಗ್ ಮಾಡುತ್ತಿದ್ದ. ಅದೇ ಮಾರ್ಗದಲ್ಲಿ ಸಿಬ್ಬಂದಿಯೊಂದಿಗೆ ಕಾರಿನಲ್ಲಿ ಬಂದ ಎಸ್ಐ, ‘ಕುಡಿದಿದ್ದೀಯಾ, ಗಾಂಜಾ ಸೇದಿದ್ದೀಯಾ?’ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪುತ್ರ, ‘ಇಲ್ಲ ಸಾರ್. ಈಗಷ್ಟೇ ಮಸೀದಿಯಿಂದ ಬರುತ್ತಿದ್ದೇನೆ. ನಾನು ಕೌನ್ಸಿಲರ್ ಅಜ್ಮತ್ ಅವರ ಮಗ’ ಎಂದು ಪ್ರತಿಕ್ರಿಯಿಸಿದ್ದಾನೆ. ಆಗ, ಎಸ್ಐ ಮತ್ತು ಸಿಬ್ಬಂದಿ, ‘ನೀನು ಯಾರ ಮಗನಾದರೇನು?’ ಎಂದು ಕೆಟ್ಟದಾಗಿ ನಿಂದಿಸಿ ದೊಣ್ಣೆಯಿಂದ ಹೊಡೆದಿದ್ದಾರೆ. ಜೇಬಿನಿಲ್ಲಿದ್ದ ನಗದು ಕಸಿದುಕೊಂಡಿದ್ದಾರೆ ಎಂದು ಅಜ್ಮತ್ ಸುದ್ದಿಗಾರರಿಗೆ ತಿಳಿಸಿದರು.

‘ನಾನೇನು ಮಾಡಿಲ್ಲ’ ಎಂದು ಪುತ್ರ ಅಂಗಲಾಚಿದರೂ ಬಿಡದೆ ಥಳಿಸಿರುವ ಎಸ್ಐ ನಂತರ, ಕಾರಿನಲ್ಲಿ ಮಗನನ್ನು ತುಂಬಿಕೊಂಡು ಹಲ್ಲೆ ಮಾಡಿಕೊಂಡೇ ಠಾಣೆಯತ್ತ ಹೊರಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ, ನಾನು ತಕ್ಷಣ ಹೋಗಿ ಕಾರು ಅಡ್ಡಗಟ್ಟಿದೆ. ಯಾವ ಕಾರಣಕ್ಕೆ ಮಗನ ಮೇಲೆ ಹಲ್ಲೇ ನಡೆಸಿದ್ದೀರಿ ಎಂದು ವಾಗ್ವಾದ ನಡೆಸಿದೆ. ಆಗ ಮಗನನ್ನು ರಸ್ತೆಯಲ್ಲೇ ಬಿಟ್ಟು ಹೋದರು. ಹಲ್ಲೆಯಿಂದಾಗಿ ನಿಲ್ಲಲು ಆಗದ ಸ್ಥಿತಿಯಲ್ಲಿದ್ದ ಮಗನನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದೇನೆ ಎಂದು ಹೇಳಿದರು.

ಹಲ್ಲೆಯಿಂದಾಗಿ ಮಗನ ಕೈ ಮತ್ತು ಕಾಲುಗಳಿಗೆ ಗಂಭೀರ ಗಾಯವಾಗಿದೆ. ಎದೆನೋವು ಕಾಣಿಸಿಕೊಂಡಿದೆ. ಕಾರಣವಿಲ್ಲದೆ ನನ್ನ ಮಗನಿಗೆ ಹೊಡೆದ ಎಸ್ಐ ಮತ್ತು ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಬುಧವಾರ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು. ಜಿಲ್ಲಾಸ್ಪತ್ರೆಗೆ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಸೇರಿದಂತೆ ಹಲವು ಸದಸ್ಯರು ಭೇಟಿ ನೀಡಿ ಫೈರೋಜ್ ಆರೋಗ್ಯ ವಿಚಾರಿಸಿದರು.

ಘಟನೆ ಕುರಿತು ಪ್ರತಿಕ್ರಿಯೆ ಪಡೆಯಲು ಎಸ್ಐ ತನ್ವೀರ್, ಸರ್ಕಲ್ ಇನ್ಸ್ಪೆಕ್ಟರ್, ಡಿವೈಎಸ್ಪಿ, ಎಸ್ಪಿಗೆ ‘ಪ್ರಜಾವಾಣಿ’ ಕರೆ ಮಾಡಿದಾಗ, ಯಾರೂ ಸ್ವೀಕರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.