ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ :ಕಾಡಾನೆ ದಾಳಿ, ತೆಂಗಿನ ಸಸಿಗಳು ಧ್ವಂಸ

Last Updated 12 ಜೂನ್ 2020, 14:52 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕಿನ ವಿರುಪಾಕ್ಷಿಪುರ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಗುರುವಾರ ರಾತ್ರಿ ತೆಂಗಿನ ತೋಟವೊಂದರ ಮೇಲೆ ದಾಳಿ ನಡೆಸಿ ಹತ್ತಕ್ಕೂ ಹೆಚ್ಚು ತೆಂಗಿನ ಸಸಿಗಳನ್ನು ಧ್ವಂಸ ಮಾಡಿವೆ.

ಗ್ರಾಮದ ವೆಂಕಟಶೆಟ್ಟಿ ಎಂಬುವರಿಗೆ ಈ ತೆಂಗಿನ ತೋಟ ಸೇರಿದೆ. ಇದರಿಂದ ಸಾವಿರಾರು ರೂಪಾಯಿ ನಷ್ಟವಾಗಿದೆ. ಮುಂದಿನ ವರ್ಷ ಫಸಲು ಬಿಡುವ ಹಂತದಲ್ಲಿದ್ದ ತೆಂಗಿನ ಸಸಿಗಳನ್ನು ಬುಡ ಸಮೇತ ಉರುಳಿಸಿವೆ. ಪಕ್ಕದಲ್ಲೇ ಇದ್ದ ಪಂಪ್ ಸೆಟ್ ಪೈಪ್‌ಗಳನ್ನು ಕಿತ್ತುಹಾಕಿದೆ.

ಈ ಭಾಗದಲ್ಲಿ ಕೆಲವು ದಿನಗಳಿಂದಲೂ ಆನೆಗಳ ದಾಳಿ ನಡೆಯುತ್ತಿದೆ. ಆಗಾಗ್ಗೆ ದಾಳಿ ಮಾಡುವ ಆನೆಗಳು ರೈತರ ತೆಂಗು, ಮಾವು, ಬಾಳೆ ಸೇರಿದಂತೆ ಇತರ ಬೆಳೆಗಳನ್ನು ನಾಶ ಮಾಡುತ್ತಿವೆ. ತೆಂಗಿನ ಕಲ್ಲು ಅರಣ್ಯ ಪ್ರದೇಶದಿಂದ ಬಂದಿರುವ ಈ ಆನೆಗಳು ರಾತ್ರಿ ವೇಳೆಯಲ್ಲಿ ದಾಳಿ ನಡೆಸುತ್ತಿದ್ದು, ರೈತರಿಗೆ ನುಂಗಲಾರದ ತುತ್ತಾಗಿದೆ.

ಅರಣ್ಯ ಇಲಾಖೆ ಆನೆಗಳನ್ನು ಕಾಡಿಗೆ ಓಡಿಸಬೇಕು ಹಾಗೂ ಬೆಳೆ ಕಳೆದುಕೊಂಡ ರೈತನಿಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT