ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಪಟ್ಟಣ: ಅಸ್ವಸ್ಥಕ್ಕೆ ಐಸ್‌ ಕ್ರೀಂ ಕಾರಣ

ಮದುವೆಯಲ್ಲಿ 100ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದ ಘಟನೆ
Published 23 ಮೇ 2024, 4:39 IST
Last Updated 23 ಮೇ 2024, 4:39 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕಿನ ಸಾತನೂರು ವೃತ್ತದ ಬಳಿಯ ಪಾರ್ಟಿ ಹಾಲ್‌ನಲ್ಲಿ ಈಚೆಗೆ ನಡೆದಿದ್ದ ಮದುವೆಯಲ್ಲಿ ಊಟ ಸೇವಿಸಿ ನಾಲ್ಕೈದು ತಾಸುಗಳ ಬಳಿಕ, ಚನ್ನಪಟ್ಟಣ ಮತ್ತು ಮಾಗಡಿಯಲ್ಲಿ 100ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದ ಘಟನೆಗೆ ಐಸ್‌ ಕ್ರೀಂ ಸೇವನೆ ಎಂಬುದು ಗೊತ್ತಾಗಿದೆ.

ಆಹಾರ ಸುರಕ್ಷತಾ ಅಧಿಕಾರಿಗಳು ಸಂಗ್ರಹಿಸಿದ್ದ ಆಹಾರದ ಮಾದರಿಯ ವರದಿ ಬಂದಿದ್ದು, ಘಟನೆಗೆ ಐಸ್‌ ಕ್ರೀಂ ಸೇವನೆ ಕಾರಣ ಎಂಬ ಮಾಹಿತಿ ಹೊರಬಿದ್ದಿದೆ.

ಮಿಲನ ಪಾರ್ಟಿ ಹಾಲ್‌ನಲ್ಲಿ ಮೇ 5ರಂದು ಘಟನೆ ನಡೆದಿತ್ತು. ಅಸ್ವಸ್ಥರಿಗೆ ಚನ್ನಪಟ್ಟಣ, ರಾಮನಗರ ಹಾಗೂ ಮಾಗಡಿಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಘಟನೆ ಸ್ಥಳಕ್ಕೆ ಭೇಟಿ ನೀಡಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು, ಮದುವೆಗೆ ಬಂದವರು ಸೇವಿಸಿದ್ದ ಆಹಾರ ಮತ್ತು ಐಸ್‌ ಕ್ರೀಂ ಮಾದರಿಯನ್ನು ಸಂಗ್ರಹಿಸಿದ್ದರು.

ಮದುವೆಯಲ್ಲಿ ಊಟದ ಬಳಿಕ ನೀಡಿದ್ದ ಐಸ್‌ ಕ್ರೀಂ ಸುರಕ್ಷತೆಗೆ ಅನುಗುಣವಾಗಿಲ್ಲ. ಜೊತೆಗೆ ಅದನ್ನು ತಯಾರಿಸಿದ ಜಾಗದಲ್ಲಿ ನೈರ್ಮಲ್ಯ ಕೊರತೆ ಇದ್ದಿದ್ದರಿಂದ ಐಸ್‌ ಕ್ರೀಂ ಕಲುಷಿತವಾಗಿರುವುದು ವರದಿಯಲ್ಲಿ ಗೊತ್ತಾಗಿದೆ. ಹಾಗಾಗಿ, ಅದನ್ನು ತಯಾರಿಸಿದ ಕಂಪನಿಗೆ ನೋಟಿಸ್ ನೀಡಿ ಬೀಗ ಜಡಿಸಿ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುವುದು. ಅಲ್ಲದೆ, ಪಾರ್ಟಿ ಹಾಲ್‌ನಲ್ಲೂ ನೈರ್ಮಲ್ಯದ ಕೊರತೆ ಇದ್ದು, ಅದರ ಮಾಲೀಕರಿಗೂ ನೋಟಿಸ್ ನೀಡಲಾಗುವುದು ಎಂದು ಇಲಾಖೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT