ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿ ವರದಿ ಪರಿಣಾಮ | ಕುದೂರು: ರಾಜಕಾಲುವೆ ಸ್ವಚ್ಛತೆಗೆ ಮುಂದಾದ ಪಂಚಾಯಿತಿ

Published 2 ಜುಲೈ 2024, 5:21 IST
Last Updated 2 ಜುಲೈ 2024, 5:21 IST
ಅಕ್ಷರ ಗಾತ್ರ

ಕುದೂರು: ಪಟ್ಟಣದಲ್ಲಿ ಗಿಡಗಂಟೆ, ತ್ಯಾಜ್ಯದಿಂದ ಆವೃತವಾಗಿದ್ದ ರಾಜಕಾಲುವೆ ಸ್ವಚ್ಛತೆಗೆ ಗ್ರಾಮ ಪಂಚಾಯಿತಿ ಭಾನುವಾರ ಚಾಲನೆ ನೀಡಿದೆ.

ರಾಜಕಾಲುವೆ ಹಾಗೂ ಚರಂಡಿ ಅಧ್ವಾನ ಕುರಿತು ಪ್ರಜಾವಾಣಿಯ ನಮ್ಮ ಜನ ನಮ್ಮ ಧ್ವನಿ ಅಂಕಣದಲ್ಲಿ 'ರಾಜಕಾಲುವೆ ಚರಂಡಿ ಆವರಿಸಿದ ಕಸ-ಗಿಡಗಂಟಿ' ಶೀರ್ಷಿಕೆಯಡಿ ಜೂನ್ 17ರಂದು ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಪಂಚಾಯಿತಿ ಅಧಿಕಾರಿಗಳು ರಾಜಕಾಲುವೆ ಹಾಗೂ ಚರಂಡಿಗಳ ಸ್ವಚ್ಛತೆಗೆ ಕ್ರಮವಹಿಸಿದ್ದಾರೆ.

ಪೊಲೀಸ್ ಠಾಣೆ ಎದುರಿನ ಸಂತೆ ಬೀದಿ ರಸ್ತೆಯ ಚರಂಡಿಗೆ ವಾಟದ ಸಮಸ್ಯೆ ಇದ್ದು ಹೊಸದಾಗಿ ಚರಂಡಿ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಲಾಗಿದೆ. ಇನ್ನು ಕೆಲವು ದಿನಗಳಲ್ಲಿ ಶಿವಗಂಗೆ ಮುಖ್ಯರಸ್ತೆಯ ರಾಜಕಾಲುವೆಯನ್ನು ಸ್ವಚ್ಛಗೊಳಿಸಲಾಗುವುದು.

ಮಳೆಗಾಲ ಎದುರಿಸುವ ನಿಟ್ಟಿನಲ್ಲಿ ನೀರು ನಿಲ್ಲುವ ಸ್ಥಳ ಗುರುತಿಸಿ ಸ್ವಚ್ಛಗೊಳಿಸಲಾಗುತ್ತಿದೆ ಎಂದು ಪಿಡಿಒ ಪುರುಷೋತ್ತಮ್ ತಿಳಿಸಿದರು.

ಬಾಕ್ಸ್: ನಾಗರಿಕರು ಸಹ ತ್ಯಾಜ್ಯ ವಿಲೇವಾರಿಯಲ್ಲಿ ಪ್ರಜ್ಞಾವಂತಿಕೆ ಮೆರೆಯಬೇಕು. ಹಸಿ ಕಸ, ಒಣ ಕಸ ವಿಂಗಡಿಸದೆ ಕಸದ ವಾಹನಕ್ಕೆ ನೀಡಿದರೆ ಅದನ್ನು ಇನ್ನುಮುಂದೆ ತೆಗೆದುಕೊಳ್ಳದಂತೆ ವಾಹನ ಚಾಲಕರಿಗೆ ತಿಳಿಸಲಾಗಿದೆ.

ಕುದೂರು ಪಟ್ಟಣದ ಮಾರುತಿ ನಗರದ ಚರಂಡಿಯ ಹೂಳನ್ನು ಜೆಸಿಬಿ ಯಂತ್ರದ ಸಹಾಯದಿಂದ ಸ್ವಚ್ಛಗೊಳಿಸಲಾಯಿತು.
ಕುದೂರು ಪಟ್ಟಣದ ಮಾರುತಿ ನಗರದ ಚರಂಡಿಯ ಹೂಳನ್ನು ಜೆಸಿಬಿ ಯಂತ್ರದ ಸಹಾಯದಿಂದ ಸ್ವಚ್ಛಗೊಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT