ಬುಧವಾರ, ಡಿಸೆಂಬರ್ 2, 2020
19 °C

ರಾಮನಗರ: ಪೋಷಕರನ್ನು ಬೆದರಿಸಲು ತಾನೇ‌ 'ಕಿಡ್ನಾಪ್' ಆದ ಬಾಲಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಓದುವಂತೆ ಒತ್ತಡ ಹೇರಿದ್ದ ಪೋಷಕರನ್ನು ಬೆದರಿಸುವ ಸಲುವಾಗಿ ತಾನೇ ಅಪಹರಣವಾದಂತೆ ನಾಟಕ ಆಡಿದ್ದ ಬಾಲಕನನ್ನು  ಕನಕಪುರ ಪೊಲೀಸರು ಪತ್ತೆ‌ ಮಾಡಿದ್ದು, ತಿರುಪತಿಯಿಂದ ವಾಪಸ್ ಕರೆ ತಂದಿದ್ದಾರೆ.

ಸದ್ಯ ಕನಕಪುರದಲ್ಲಿ ವಾಸ ಇರುವ, ತಮಿಳುನಾಡು ಮೂಲದ ಬಟ್ಟೆ ವ್ಯಾಪಾರಿಯೊಬ್ಬರ 16 ವರ್ಷದ ಬಾಲಕ ಕಳೆದ ಶುಕ್ರವಾರ ಸೈಬರ್ ಕೇಂದ್ರಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದು, ಬಳಿಕ‌ ನಾಪತ್ತೆಯಾಗಿದ್ದ. ಅದಾದ ಕೆಲ ಸಮಯದಲ್ಲಿ ಬಾಲಕನ ನೆರೆ ಮನೆಯವರಿಗೆ ವಾಟ್ಸಪ್ ನಲ್ಲಿ‌ ಒಂದಿಷ್ಟು ಚಿತ್ರಗಳು ಬಂದಿದ್ದವು. ಆತನನ್ನು ಶೌಚಾಲಯವೊಂದರಲ್ಲಿ ಕಟ್ಟಿ ಹಾಕಲಾಗಿತ್ತು. 5 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆಯನ್ನೂ ಸಂದೇಶದ ಮೂಲಕ‌ ಇಡಲಾಗಿತ್ತು. ಇದರಿಂದ ಆತಂಕಕ್ಕೆ ಒಳಗಾದ ಪೋಷಕರು ಕನಕಪುರ ಟೌನ್ ಠಾಣೆಯಲ್ಲಿ ದೂರು‌ ನೀಡಿದ್ದರು.

ಸಂದೇಶದ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಬಾಲಕನೇ ತನ್ನ ಕಿಡ್ನಾಪ್ ಆದಂತೆ ನಾಟಕ‌ ಆಡಿದ್ದು, ಸ್ನೇಹಿತರ ನೆರವಿನಿಂದ ಫೋಟೊ ಕಳುಹಿಸಿ ಹಣಕ್ಕೆ ಬೇಡಿಕೆಯನ್ನೂ ಇಟ್ಟಿದ್ದ. ಚೆನ್ನಾಗಿ ಓದುವಂತೆ ಪೋಷಕರು ಪದೇ ಪದೇ ಒತ್ತಡ ಹೇರುತ್ತಿದ್ದರು. ಹೀಗಾಗಿ ಇದರಿಂದ ಅಪಹರಣದ ನಾಟಕ ಆಡಿದ್ದಾಗಿ‌ ಬಾಲಕ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

ಇದೀಗ ಬಾಲಕನನ್ನು ಆತನ ಪೋಷಕರ ಮನೆಗೆ ಕರೆತರಲಾಗಿದ್ದು, ವಿಚಾರಣೆ ಮುಂದುವರಿದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.