ವೈದ್ಯಕೀಯ ಶಿಕ್ಷಣಕ್ಕೆ ಪೂರಕವಾಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಒಟ್ಟಿಗೆ ಇರಬೇಕು. ಸದ್ಯ ಎಲ್ಲಾ ಕಡೆ ಇದೇ ರೀತಿ ಇದೆ. ಆದರೆ ರಾಮನಗರದಲ್ಲಿ ಮಾತ್ರ ಕಾಲೇಜು ಒಂದು ಕಡೆ ಆಸ್ಪತ್ರೆ ಮತ್ತೊಂದು ಕಡೆಯಾದರೆ ಹಲವು ಪ್ರಾಯೋಗಿಕ ತೊಂದರೆಗಳಾಗಲಿವೆ
ಡಾ. ಸಿ.ಎನ್. ಮಂಜುನಾಥ್ ಸಂಸದ
150 ವೈದ್ಯಕೀಯ ಸೀಟುಗಳ ಸಾಮರ್ಥ್ಯದ ರಾಮನಗರ ವೈದ್ಯಕೀಯ ಕಾಲೇಜಿಗೆ 650 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಬೇಕು. ಇನ್ನೂ ಹೆಚ್ಚಿನ ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು
ಡಾ. ಬಿ.ಸಿ. ಭಗವಾನ್ ಕುಲಪತಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ