ಕನಕಪುರ: ಹಾಡು ಹಗಲೇ ಅಂಚೆ ಕಚೇರಿಯಲ್ಲಿ ಕ್ಯಾಸಿಯರ್ ಮತ್ತು ಪೋಸ್ಟ್ ಮಾಸ್ಟರ್ ಗಮನ ಬೇರೆ ಕಡೆ ಸೆಳೆದು ₹5 ಲಕ್ಷ ಕಳ್ಳತನ ಮಾಡಿರುವ ಘಟನೆ ಬುಧವಾರ ನಡೆದಿದೆ.

ನಗರದ ಎಂ.ಎಚ್.ಎಸ್ ರಸ್ತೆಯಲ್ಲಿರುವ ಅಂಚೆ ಕಚೇರಿಯಲ್ಲಿ ಬುದುವಾರ ಮಧ್ಯಾಹ್ನ 12 ಗಂಟೆಯಲ್ಲಿ ಈ ಘಟನೆ ನಡೆದಿದ್ದು, ನಗರ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.

ಬುಧವಾರ ಬೆಳೆಗ್ಗೆ 11ಕ್ಕೆ ಅಂಚೆ ಕಚೇರಿ ನೌಕರರು ಎಸ್ಬಿಐ ಬ್ಯಾಂಕ್ನಿಂದ ₹ 45 ಲಕ್ಷ ಹಣ ತಂದು ಇಟ್ಟಿದ್ದರು. ಅದರಲ್ಲಿ ಸಾತನೂರು ಅಂಚೆ ಕಚೇರಿಗೆ ₹ 7.5 ಲಕ್ಷ, ಕೋಡಿಹಳ್ಳಿ ಅಂಚೆ ಕಚೇರಿಗೆ ₹ 8 ಲಕ್ಷ ಕೊಟ್ಟು, ಉಳಿದ ಹಣವನ್ನು ಖಜಾನೆ ಕೌಂಟರ್ ಬಳಿ ಇಟ್ಟಿದ್ದರು. ಮಧ್ಯಾಹ್ನ ಕ್ಯಾಸಿಯರ್ ಮಹಾಲಕ್ಷ್ಮಿ ಖಜಾನೆಯಲ್ಲಿ ಹಣವನ್ನು ಪರಿಶೀಲನೆ ಮಾಡಿದಾಗ 5 ಲಕ್ಷ ಕಡಿಮೆ ಇರುವುದು ಬೆಳಕಿಗೆ ಬಂದಿದೆ. ಸಿಸಿಟಿವಿ ಪರಿಶೀಲಿಸಿದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ.

ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ತನಿಖೆ ಕೈಗೊಂಡಿದ್ದು ಕಳ್ಳರ ಬಂಧನಕ್ಕೆ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.