ರಾಮನಗರ: ‘ಅಮರ ಶಿಲ್ಪಿ ಜಕಣಾಚಾರಿ ಅವರು ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಸೇರಿದಂತೆ ವಿವಿಧೆಡೆ ನಿರ್ಮಿಸಿರುವ ಶಿಲ್ಪಕಲೆಗಳನ್ನು ನಿರ್ಮಿಸುವ ತಮ್ಮ ಕಲಾವಂತಿಕೆಯಲ್ಲಿ ಇಂದಿಗೂ ಅಮರರಾಗಿದ್ದಾರೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸತೀಶ್ ಅಭಿಪ್ರಾಯಪಟ್ಟರು.

ನಗರದ ಕಂದಾಯ ಭವನದ ಮೂರನೇ ಮಹಡಿಯ ಕೊಠಡಿ ಸಂಖ್ಯೆ–409ರಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಮಾತನಾಡಿದರು.

‘ಅಮೋಘ ಶಿಲ್ಪಕಲಾಕೃತಿಗಳ ಕೊಡುಗೆಯನ್ನು ಈ ನಾಡಿಗೆ ಕೊಟ್ಟಿರುವ ಜಕಣಾಚಾರಿ ಅವರು, ಎಲ್ಲಿಯೂ ಸಹ ಅವುಗಳನ್ನು ರಚಿಸಿರುವುದು ತಾನೇ ಎಂದು ಬರೆದುಕೊಂಡಿರುವುದಿಲ್ಲ. ಆ ರೀತಿಯ ನೈಜ ಕಲಾವಿದರು ಎಂದೆಂದಿಗೂ ಅಜರಾಮರರಾಗಿ ಉಳಿದಿರುತ್ತಾರೆ’ ಎಂದರು.

‘ಕುಶಲಕರ್ಮ ಸಮುದಾಯದವಾದ ವಿಶ್ವಕರ್ಮರ ಅಭಿವೃದ್ಧಿಗೆ ಸರ್ಕಾರ ಹಲವು ಸೌಲಭ್ಯಗಳನ್ನು ತಂದಿದೆ. ಸಮುದಾಯದವರು ಅವುಗಳ ಪ್ರಯೋಜನ ಪಡೆದುಕೊಂಡು ಮುಂದೆ ಬರಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಿ, ತಮ್ಮ ಮೂಲ ಕಸುಬಿನ ಜೊತೆಗೆ ಅವರು ಸಮಾಜಕ್ಕೆ ಕೊಡುಗೆಯಾಗುವ ರೀತಿಯಲ್ಲಿ ಬೆಳೆಸಬೇಕು’ ಎಂದು ಸಲಹೆ ನೀಡಿದರು.

ಸಮುದಾಯದ ಮುಖಂಡ ಶ್ರೀಧರ್ ಆಚಾರ್ ಮಾತನಾಡಿ, ‘ವಿಶ್ವದಲ್ಲಿಯೇ ಅತ್ಯುತ್ತಮ ವಾಸ್ತುಶಿಲ್ಪ ಕಲೆಯನ್ನು ಮುಂಚೂಣಿಗೆ ತಂದಿದೇ ಅಮರಶಿಲ್ಪಿ ಜಕಣಾಚಾರಿ. ಅವರು ನಮ್ಮ ಸಮುದಾಯದವರಾಗಿರುವುದು ನಮಗೆ ಹೆಮ್ಮೆಯ ವಿಷಯ. ಅವರು ಹಾಕಿಕೊಟ್ಟಂತಹ ದಾರಿಯಲ್ಲಿಯೇ ನಮ್ಮಗಳ ಮೂಲ ಕಸುಬನ್ನು ಇಂದಿನ ಆಧುನಿಕ ಜಗತ್ತಿಗೆ ತಕ್ಕಂತೆ ಮುಂದುವರೆಸಿಕೊಂಡು ಹೋಗಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಶಿವಕುಮಾರ್, ಸಮುದಾಯದ ಮುಖಂಡರಾದ ಬಿ. ಉಮೇಶ್, ಪಿ. ಲಿಂಗಾಚಾರ್, ಶ್ರೀನಿವಾಸ್, ಪ್ರಭು, ಜಗನ್ನಾಥ್, ಲೋಕೇಶ್ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.