ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ಯಾನುಭೋಗನಹಳ್ಳಿ ಎಂಪಿಸಿಎಸ್ ಗೆ ನಿರ್ದೇಶಕರ ಆಯ್ಕೆ

Published 7 ಜುಲೈ 2024, 14:52 IST
Last Updated 7 ಜುಲೈ 2024, 14:52 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಚನ್ನಪಟ್ಟಣ: ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿ ಶ್ಯಾನುಭೋಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 11 ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಹತ್ತು ಮಂದಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಭಾರಿಸಿದರು.

ಜೆಡಿಎಸ್ ಬೆಂಬಲಿತರಾದ ಬಿ.ರವಿ, ಎಸ್.ಬಿ.ಶಿವಮೂರ್ತಿ, ಮಹದೇವಯ್ಯ, ಮಲ್ಲೇಶ್, ಪುಟ್ಟಮಾದೇಗೌಡ, ಎನ್.ಶಿವಮಾದು, ಚಿಕ್ಕಬಸವಯ್ಯ, ಶಿವಲಿಂಗೇಗೌಡ, ಚಂದ್ರಮ್ಮ, ಈ.ರಾಜಮ್ಮ ಆಯ್ಕೆಯಾದರು. ಉಳಿದಂತೆ ಬಿಜೆಪಿ ಬೆಂಬಲಿತ ಎಸ್.ಡಿ.ಅನಿಲ್ ಕುಮಾರ್ ಆಯ್ಕೆಯಾದರು.

ಪರಿಶಿಷ್ಟ ಜಾತಿ ಹಾಗೂ ಪಂಗಡ ಈ ಎರಡು ಸ್ಥಾನಗಳಿಗೆ ಯಾರೊಬ್ಬರು ನಾಮಪತ್ರ ಸಲ್ಲಿಸದ ಕಾರಣ ಖಾಲಿ ಉಳಿದವು.

ಎಂಪಿಸಿಎಸ್ ಸಿಇಒ ಮಾದಪ್ಪ, ಹಾಲು ಪರೀಕ್ಷಕ ಪುಟ್ಟಸ್ವಾಮಿ, ಸಹಾಯಕರಾದ ರಾಜು ಚುನಾವಣೆಗೆ ಸಹಕರಿಸಿದರು.

ಗ್ರಾಮದ ಮುಖಂಡರಾದ ಪುಟ್ಟಸ್ವಾಮಿ, ಗೋಪಾಲ್, ಯೋಗೇಶ್, ಪಾಪಣ್ಣ, ಬಸವರಾಜು, ಮರೀಗೌಡ, ಆನಂದ, ಕುಮಾರ್, ನಾಗೇಶ್, ದಿಲೀಪ್, ಕುಳ್ಳಪ್ಪ, ಮಧು, ಪ್ರತಾಪ್, ಕಿರಣ್, ದರ್ಶನ್, ವಿಕಾಸ್, ಸತೀಶ್, ರವಿ, ಮಹದೇವು, ವೆಂಕಟೇಶ್, ಗಿರೀಶ್, ಮಾದೇಗೌಡ, ಚೇತನ್ ಇತರರು ನೂತನ ನಿರ್ದೇಶಕರನ್ನು ಅಭಿನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT