ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ಯಾವಸಂದ್ರ ಗ್ರಾ.ಪಂ ಉಪಾಧ್ಯಕ್ಷರಾಗಿ ಶಿವಕುಮಾರ್‌ ಆಯ್ಕೆ

Last Updated 8 ಜುಲೈ 2019, 13:39 IST
ಅಕ್ಷರ ಗಾತ್ರ

ಕನಕಪುರ: ದ್ಯಾವಸಂದ್ರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಒಮ್ಮತದ ಅಭ್ಯರ್ಥಿ ಕಾಡುಜಕ್ಕಸಂದ್ರ ಶಿವಕುಮಾರ್‌ ಆಯ್ಕೆಯಾದರು.

ಉಪಾಧ್ಯಕ್ಷ ಪ್ರಭಾಕರ ರೆಡ್ಡಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು.

ಶಿವಕುಮಾರ್‌ ಅವರು ಕಾಂಗ್ರೆಸ್‌ – ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅತ್ತಿಕುಪ್ಪೆ ಕೃಷ್ಣನಾಯ್ಕ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಒಟ್ಟು 19ಸದಸ್ಯರನ್ನು ಹೊಂದಿದ್ದ ಪಂಚಾಯಿತಿಯಲ್ಲಿ ಕಳ್ಳಿಭೀಮಸಂದ್ರ ಸದಸ್ಯೆ ಕೆಂಪಮ್ಮ ಗೈರು ಹಾಜರಾಗಿದ್ದರು. ಒಂದೇ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಗಳಾದ ಸಿಡಿಪಿಒ ಸುರೇಂದ್ರ ಅವರು ನಿಗದಿತ ಸಮಯಕ್ಕೆ ಮುಕ್ತ ಚುನಾವಣೆ ನಡೆಸಿದರು.

ಚುನಾವಣೆಯಲ್ಲಿ ಒಮ್ಮತದ ಅಭ್ಯರ್ಥಿ ಶಿವಕುಮಾರ್‌ ಅವರಿಗೆ 15, ಬಂಡಾಯ ಅಭ್ಯರ್ಥಿ ಕೃಷ್ಣನಾಯ್ಕ್‌ ಅವರಿಗೆ 2 ಮತ ಲಭಿಸಿದವು. 1ಮತ ತಿರಸ್ಕೃತಗೊಂಡಿತು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವರುದ್ರಯ್ಯ, ಕಾರ್ಯದರ್ಶಿ ಮಹಾಂತೇಶ್‌, ಕರವಸೂಲಿಗಾರ ಶಿವರಾಜು ಚುನಾವಣಾ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು.

ಅಭಿನಂದನೆ: ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಕೆ.ನಾಗರಾಜು, ಮಾಜಿ ಸದಸ್ಯರಾದ ಡಿ.ಎಸ್‌.ಭುಜಂಗಯ್ಯ, ಸೌಭಾಗ್ಯಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶ್ರೀಕಂಠಯ್ಯ, ಬಿ.ಎಸ್‌.ರವಿಕುಮಾರ್‌, ಶಿಲ್ಪಾ ಶಿವಾನಂದ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜೆಸಿಬಿ ಅಶೋಕ್‌, ದ್ಯಾವಸಂದ್ರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೂರ್ತಿ, ಮಾಜಿ ಉಪಾಧ್ಯಕ್ಷ ಗಣೇಶ್‌, ಹಾರೋಹಳ್ಳಿ ಹೋಬಳಿ ಜೆಡಿಎಸ್‌ ಅಧ್ಯಕ್ಷ ಗಬ್ಬಾಡಿ ಮಲ್ಲಯ್ಯ, ಪಿಎಲ್‌ಡಿ ಬ್ಯಾಂಕ್‌ ಉಪಾಧ್ಯಕ್ಷ ಗೋವಿಂದರಾಜು, ಮುಖಂಡರಾದ ರಾಂಪುರ ನಾಗೇಶ್‌, ಎಚ್‌.ಸಿ.ಶೇಖರ್‌, ಕೋಟೆ ಕುಮಾರ್‌, ಗೊಟ್ಟಿಗೆಹಳ್ಳಿ ಮಲ್ಲೇಶ್‌, ಶಿವಲಿಂಗಯ್ಯ, ಹಾರೋಹಳ್ಳಿ ಸೋಮಶೇಖರ್‌, ಚಂದ್ರು ರಾಂಪುರ, ಕೋಟೆ ಪ್ರಕಾಶ್‌, ರುದ್ರೇಶ್‌ ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT