ಬೆಂಗಳೂರು: ಪಂದ್ಯದ ಕೊನೆಯಲ್ಲಿ ಪುಟಿದೆದ್ದ ಎಫ್ಸಿ ಡೆಕ್ಕನ್ ತಂಡವು ಬಿಡಿಎಫ್ಎ ಸೂಪರ್ ಡಿವಿಷನ್ ಫುಟ್ಬಾಲ್ ಲೀಗ್ ಚಾಂಪಿಯನ್ಷಿಪ್ನ ಪಂದ್ಯದಲ್ಲಿ 3–2ರಿಂದ ಬೆಂಗಳೂರು ಡ್ರೀಮ್ ಯುನೈಟೆಡ್ ಎಫ್ಸಿ ತಂಡವನ್ನು ಮಣಿಸಿತು.

ಗುರುವಾರ ನಡೆದ ಪಂದ್ಯದಲ್ಲಿ ರಾಹಿಲ್ ಸರ್ದಾರ್ (90+2), ಬಿ.ಯು. ಮಿಥುನ್ (90+4ನೇ), ನ್ಗೈರಂಗಬಮ್ ರಾಕೇಶ್ ಸಿಂಗ್ (90+6ನೇ) ಅವರು ಡೆಕ್ಕನ್ ತಂಡದ ಪರ ತಲಾ ಒಂದು ಗೋಲು ಗಳಿಸಿದರು. ಯುನೈಟೆಡ್ ತಂಡದ ರಾಜು ಬಾಸ್ಫೋರ್ (49ನೇ) ನವೋರೆಂ ನನಾನೋ ಮೆಟೈ (80ನೇ) ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು.

ಮತ್ತೊಂದು ಪಂದ್ಯದಲ್ಲಿ ಎಂಎಫ್ಎಆರ್ ಸ್ಪೂಡೆಂಟ್ಸ್ ಯೂನಿಯನ್ ಎಫ್ಸಿ ತಂಡವು 4–2ರಿಂದ ಎಫ್ಸಿ ಅಗ್ನಿಪುತ್ರ ತಂಡವನ್ನು ಪರಾಭವಗೊಳಿಸಿತು. ಎಂಎಫ್ಎಆರ್ನ ಪ್ರತೀಕ್ ಸ್ವಾಮಿ (15, 42ನೇ) ಎರಡು ಗೋಲು ಗಳಿಸಿದರೆ, ಬಿ.ಎಸ್. ಮೃಣಾಲ್ ಮುತ್ತಣ್ಣ (38ನೇ), ನಿರ್ವೃತಿ ಸುನಿಲ್ ಪವನೋಜಿ (90+1ನೇ) ತಲಾ ಒಂದು ಗೋಲು ತಂದಿತ್ತರು. ದ್ವಾಲಿನ್ ಡಿ.ಪಿ. ಶೆರ್ಪಾ (4ನೇ) ಲಾಲ್ನುಂಜಮಾ (11ನೇ) ಅಗ್ನಿಪುತ್ರ ತಂಡದ ಪರ ತಲಾ ಒಂದು ಗೋಲು ದಾಖಲಿಸಿದರು.

ನಾಳಿನ ಪಂದ್ಯಗಳು

ಎಚ್ಎಎಲ್ ಎಫ್ಸಿ– ರಿಯಲ್ ಚಿಕ್ಕಮಗಳೂರು ಎಫ್ಸಿ (ಮಧ್ಯಾಹ್ನ 1.30)

ಎಎಸ್ಸಿ ಅಂಡ್ ಸೆಂಟರ್ ಎಫ್ಸಿ– ಕೊಡಗು ಎಫ್ಸಿ (ಮಧ್ಯಾಹ್ನ 3.30)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.