ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ ಜಿಲ್ಲೆಯ ಹೆಸರು ಬದಲಾಯಿಸದಂತೆ ಒತ್ತಾಯ

Published : 2 ಆಗಸ್ಟ್ 2024, 13:22 IST
Last Updated : 2 ಆಗಸ್ಟ್ 2024, 13:22 IST
ಫಾಲೋ ಮಾಡಿ
Comments

ಕನಕಪುರ: ಅಭಿವೃದ್ಧಿಯ ಹೆಸರಿನಲ್ಲಿ ಐತಿಹಾಸಿಕ ಇತಿಹಾಸ ಇರುವ, ಧಾರ್ಮಿಕ, ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ರಾಮನಗರ ಜಿಲ್ಲೆಯ ರಾಮನಗರ ಹೆಸರನ್ನು ಕೈಬಿಡಲು ಹೊರಟಿರುವುದು ಅತ್ಯಂತ ಖಂಡನೀಯ ಎಂದು ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ನಾಗಾರ್ಜುನಗೌಡ ತಿಳಿಸಿದರು.

ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡುತ್ತಿರುವುದನ್ನು ವಿರೋಧಿಸಿ ತಾಲ್ಲೂಕು ಆಡಳಿತದ ಮುಖೇನ ಮುಖ್ಯಮಂತ್ರಿಗಳಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.

ರಾಮದೇವರ ಬೆಟ್ಟದ ಮೂಲಕ ರಾಮನಗರವು ಇಡೀ ದೇಶದಲ್ಲಿ ಗುರುತಿಸಿಕೊಂಡಿದೆ. ಧಾರ್ಮಿಕ ಪರಂಪರೆ ಸಾಂಸ್ಕೃತಿಕ ನೆಲೆಕಟ್ಟಿನಿಂದ ಕೂಡಿರುವಂಥ ಜಾಗವಿದು. ನಾಡಪ್ರಭು ಕೆಂಪೇಗೌಡರು ರಾಮದುರ್ಗ ಅನ್ನುವ ಹೆಸರಿನಲ್ಲಿ ಆಡಳಿತ ನಡೆಸಿ, ಇತಿಹಾಸವನ್ನು ಸೃಷ್ಟಿಸಿದ್ದಾರೆ. ರಾಮನಗರ ಜಿಲ್ಲೆಯ ಹೆಸರನ್ನು ಬದಲಾಯಿಸುವ ಮೂಲಕ ಕೆಂಪೇಗೌಡರ ಐತಿಹಾಸಿಕ ಸತ್ಯವನ್ನು ಅಳಿಸುವ ಮತ್ತು ಅವಮಾನಿಸುವ ಕೃತ್ಯವಾಗುತ್ತದೆ, ಸರ್ಕಾರವು ಅದಕ್ಕೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದರು.

ಟಿಪ್ಪುವಿನ ಆಡಳಿತದಲ್ಲಿಯೂ ಒಮ್ಮೆ ಈ ಜಿಲ್ಲೆಯ ಹೆಸರು ಬದಲಾವಣೆಯ ಪ್ರಯತ್ನ ನಡೆದಿತ್ತು. ಇಲ್ಲಿನ ಜನರು ಆ ಕಾಲಕ್ಕೇ ಹೆಸರು ಬದಲಾವಣೆಯನ್ನು ವಿರೋಧಿಸಿ ತಡೆದಿದ್ದಾರೆ. ಈಗ ರಾಜಕೀಯ ಉದ್ದೇಶಕ್ಕೆ ಹೆಸರು ಬದಲಿಸಲು ಬಂದರೆ ಜನತೆ ಅದಕ್ಕೆ ಅವಕಾಶ ಕೊಡುವುದಿಲ್ಲ ಎಂದರು.

ರಾಜ್ಯ ಸರ್ಕಾರವು ಜಿಲ್ಲೆಯ ಹೆಸರು ಬದಲಾವಣೆಯ ನಿರ್ಧಾರದಿಂದ ಹಿಂದೆ ಸರಿಯಬೇಕು. ಒಂದು ವೇಳೆ ಬದಲಾವಣೆಗೆ ಮುಂದಾದರೆ ಸಂಘಟನೆಯಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶ್ರೀರಾಮ ಸೇನೆಯ ಜಿಲ್ಲಾ ಕಾರ್ಯದರ್ಶಿ ನವೀನ್.ಕೆ.ಎನ್, ತಾಲ್ಲೂಕು ಉಪಾಧ್ಯಕ್ಷ ಮಹೇಶ್ ಗೌಡ, ಕಾರ್ಯಕರ್ತರಾದ ದುರ್ಗೇಶ್, ಮೋಹನ್, ಚೀರ್ಣಕುಪ್ಪೆ ಕುಮಾರ್, ಹರ್ಷವರ್ಧನ್ ಇತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT