ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ: ಸರ್ಕಾರಿ ಶಾಲೆಗಳದ್ದೇ ಸಾಧನೆ

ಕನ್ನಡ ವಿಷಯದಲ್ಲಿ ಅತಿಹೆಚ್ಚು ಮಂದಿ ಉತ್ತೀರ್ಣ; ಮಾಗಡಿ, ಚನ್ನಪಟ್ಟಣಕ್ಕೆ "ಎ’ ಗ್ರೇಡ್‌
Last Updated 12 ಆಗಸ್ಟ್ 2020, 16:03 IST
ಅಕ್ಷರ ಗಾತ್ರ

ರಾಮನಗರ: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಬರೋಬ್ಬರಿ 30 ಸರ್ಕಾರಿ ಶಾಲೆಗಳು ಶೇ 100 ಫಲಿತಾಂಶ ದಾಖಲಿಸಿವೆ. ಈ ವಿಚಾರದಲ್ಲಿ ಖಾಸಗಿ ಹಾಗೂ ಅನುದಾನಿತ ಶಾಲೆಗಳನ್ನೂ ಹಿಂದಿಕ್ಕಿರುವುದು ವಿಶೇಷ.

ಜಿಲ್ಲೆಯಲ್ಲಿನ 14 ಅನುದಾನಿತ ಶಾಲೆಗಳು, 28 ಖಾಸಗಿ ಶಾಲೆಗಳು ಶೇ 100 ರಷ್ಟು ಫಲಿತಾಂಶ ಪಡೆದಿವೆ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳೂ ಶೇ.83.68ರಷ್ಟು ಸಂಖ್ಯೆಯಲ್ಲಿ ಉರ್ತಿಣರಾಗಿರುವುದು ವಿಶೇಷ. ಜಿಲ್ಲೆಯಲ್ಲಿನ ಒಟ್ಟು 124 ಸರ್ಕಾರಿ ಶಾಲೆಗಳ ಶಾಲೆಗಳ ಪೈಕಿ 88 ಶಾಲೆಗಳು ಶೇ 75ಕ್ಕಿಂತ ಹೆಚ್ಚು ಫಲಿತಾಂಶ ಪಡೆದಿವೆ. ಒಟ್ಟು 98 ಖಾಸಗಿ ಶಾಲೆಗಳ ಪೈಕಿ 85 ಶಾಲೆಗಳು ಮಾತ್ರವೇ ಶೇ 75ಕ್ಕಿಂತ ಹೆಚ್ಚು ಫಲಿತಾಂಶ ದಾಖಲಿಸಿವೆ.

ಮಾಗಡಿ, ಚನ್ನಪಟ್ಟಣ ಮುಂದು: ಈ ವರ್ಷ ಒಟ್ಟಾರೆ ಶೇ.86.43 ರಷ್ಟು ಫಲಿತಾಂಶ ಬಂದಿದೆ. ಚನ್ನಪಟ್ಟಣ ತಾಲೂಕಿನಲ್ಲಿ 2568 ವಿದ್ಯಾರ್ಥಿಗಳು ಪರೀಕ್ಷಗೆ ಹಾಜರಾಗಿದ್ದು, 2391 ವಿದ್ಯಾರ್ಥಿಗಳು ಉತೀರ್ಣರಾಗಿದ್ದಾರೆ. ಈ ಮೂಲಕ ತಾಲ್ಲೂಕು ಶೇ ಒಟ್ಟು 93.11 ಫಲಿತಾಂಶ ದಾಖಲಿಸಿ ತಾಲ್ಲೂಕುವಾರು "ಎ" ಗ್ರೇಡ್‌ ಪಡೆದಿದೆ. ಮಾಗಡಿ ತಾಲೂಕಿನ 2287 ಮಂದಿ ಪರೀಕ್ಷೆ ಬರೆದಿದ್ದು, 2133 ಮಂದಿ ಉತ್ತೀರ್ಣರಾಗಿದ್ದಾರೆ. ಒಟ್ಟು ಶೇ 93.27ರಷ್ಟು ಫಲಿತಾಂಶ ಪಡೆದಿದ್ದು, "ಎ’ ಗ್ರೇಡ್‌ ಪಡೆದು ಬೀಗುತ್ತಿದೆ. ಕನಕಪುರ ತಾಲೂಕಿನಲ್ಲಿ ಪರೀಕ್ಷೆ ಬರೆದಿದ್ದ 3365 ಮಂದಿ ಪೈಕಿ 2801 ಮಂದಿ ಪಾಸ್ ಆಗಿದ್ದಾರೆ. ಶೇ 83.24 ಫಲಿತಾಂಶ ಬಂದಿದೆ. ರಾಮನಗರ ತಾಲ್ಲೂಕಿನಲ್ಲಿ 2915 ಮಂದಿ ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 2300 ಮಂದಿ ಪಾಸಾಗಿ ಶೇ 78.90 ಫಲಿತಾಂಶ ದಾಖಲಿಸಿಕೊಂಡಿದೆ.

ಕನ್ನಡದಲ್ಲಿ ಗರಿಷ್ಠ ಫಲಿತಾಂಶ: ಬಹುತೇಕರ ಮಾತೃಭಾಷೆಯಾದ ಕನ್ನಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು ವಿಶೇಷ. ಈ ವಿಷಯದಲ್ಲಿ 12,043 ಮಂದಿ ಪರೀಕ್ಷೆ ಬರೆದಿದ್ದು, ಇದರಲ್ಲಿ 11,762 ಮಂದಿ ಉತ್ತೀರ್ಣರಾಗಿದ್ದಾರೆ. ಶೇ.97.66ರಷ್ಟು ಫಲಿತಾಂಶ ಬಂದಿದೆ. ಇಂಗ್ಲಿಷ್ ವಿಷಯದಲ್ಲಿ 12,019 ಪರೀಕ್ಷೆ ಹಾಜರಾಗಿದ್ದು, 11136 ಮಂದಿಯಷ್ಟು ಮಾತ್ರವೇ ಪಾಸ್ ಆಗಿದ್ದಾರೆ. ಈ ಮೂಲಕ ಶೇ 92.65 ರಷ್ಟು ಫಲಿತಾಂಶ ದಾಖಲಿಸಿದೆ.

ವಿದ್ಯಾರ್ಥಿಗಳಿಗೆ ಅಂಕಗಳೊಂದಿಗೆ ಶ್ರೇಣಿಯನ್ನೂ ನೀಡಲಾಗಿದೆ. 608 ವಿದ್ಯಾರ್ಥಿಗಳು ಎ ಪ್ಲಸ್‌ ಶ್ರೇಣಿ ಪಡೆದಿದ್ದಾರೆ. 2024 ವಿದ್ಯಾರ್ಥಿಗಳು ಎ ಗ್ರೇಡ್, 2927 ಮಂದಿ ಬಿ ಪ್ಲಸ್, 2973 ವಿದ್ಯಾರ್ಥಿಗಳು ಬಿ, 1712 ವಿದ್ಯಾರ್ಥಿಗಳು ಸಿ ಪ್ಪಸ್ ಹಾಗೂ 233 ವಿದ್ಯಾರ್ಥಿಗಳು ಸಿ ಶ್ರೇಣಿ ಪಡೆದುಕೊಂಡಿದ್ದಾರೆ.

ಗ್ರಾಮೀಣರ ಮೇಲುಗೈ
ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾರ್ಥಿಗಳೇ ಹೆಚ್ಚು ಫಲಿತಾಂಶ ದಾಖಲಿಸಿರುವುದು ವಿಶೇಷ. ಒಟ್ಟು 8730 ಗ್ರಾಮೀಣ ವಿದ್ಯಾರ್ಥಿಗಳಲ್ಲಿ 7614 ಮಂದಿ ಉತ್ತೀರ್ಣರಾಗಿದ್ದು, ಶೇ ಶೇ.87.25 ರಷ್ಟು ಫಲಿತಾಂಶ ಬಂದಿದೆ. ನಗರ ಪ್ರದೇಶದಲ್ಲಿ 3313 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ 2823 ಮಂದಿ ಉತ್ತೀರ್ಣರಾಗಿದ್ದಾರೆ. ಶೇ 86.42ರಷ್ಟು ಫಲಿತಾಂಶ ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT