ರಾಮನಗರ: ‘ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಕೀರ್ತಿಗೆ ಪಾತ್ರವಾಗಿರುವ ಮಧ್ಯಪ್ರದೇಶದ ಇಂದೋರ್ ಮಹಾನಗರಕ್ಕೆ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳ ತಂಡ ಪ್ರವಾಸ ಹೋಗಿ ಬಂದಿದೆ. ಅಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧ್ಯಯನ ನಡೆಸಿದೆ. ಸ್ವಚ್ಛ ರಾಮನಗರ ನಿರ್ಮಾಣದ ಸಂಕಲ್ಪದೊಂದಿಗೆ ಇಲ್ಲಿಯೂ ಹಂತ ಹಂತವಾಗಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಚ್ಛತಾ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹೇಳಿದರು.

‘ಸುಮಾರು 35 ಲಕ್ಷ ಜನಸಂಖ್ಯೆಯ ವಾಣಿಜ್ಯ ಮತ್ತು ಸಾಂಸ್ಕೃತಿಕ ನಗರವಾದ ಇಂದೋರ್ನಲ್ಲಿ ಜನರ ಸಹಭಾಗಿತ್ವ, ಉತ್ತಮ ಆಡಳಿತ ಹಾಗೂ ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಕಾರಣಕ್ಕೆ 2017ರಿಂದಲೂ ಆ ನಗರ ಸ್ವಚ್ಛತಾ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಸ್ವಚ್ಚತಾ ನಿಯಮಗಳನ್ನು ಕಟ್ಟನಿಟ್ಟಾಗಿ ಜಾರಿಗೊಳಿಸುವ ಅಲ್ಲಿನ ಮಹಾನಗರ ಪಾಲಿಕೆ, ನಿಯಮ ಮೀರಿದವರಿಗೆ ದಂಡದ ಜೊತೆಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತದೆ’ ಎಂದು ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ನಗರದ ಪ್ರತಿ ಮನೆಯಿಂದಲೂ ಹಸಿ, ಒಣ, ಪ್ಲಾಸ್ಟಿಕ್, ವೈದ್ಯಕೀಯ, ಸ್ಯಾನಿಟರಿ, ಇ–ತ್ಯಾಜ್ಯವನ್ನು ಸಹ ಪ್ರತ್ಯೇಕವಾಗಿ ವಿಂಗಡಿಸಿ ನೀಡುವುದು ಅಲ್ಲಿನ ವಿಶೇಷ. ವಿಲೇವಾರಿ ಘಟಕಗಳಲ್ಲಿ ಯಾಂತ್ರಿಕವಾಗಿ ಮತ್ತು ಕಾರ್ಮಿಕರನ್ನು ಬಳಸಿಕೊಂಡು ತ್ಯಾಜ್ಯ ವಿಂಗಡಿಸಲಾಗುತ್ತಿದೆ. ಕಸದಿಂದ ಬಯೋಗ್ಯಾಸ್ ಉತ್ಪಾದಿಸಿ ಬಸ್ಗಳಿಗೆ ಸಿಎನ್ಜಿ ಇಂಧನ ಒದಗಿಸಿ ₹50 ಕೋಟಿ ಆದಾಯ ಗಳಿಸುತ್ತಿದ್ದಾರೆ. ಕಾಂಪೋಸ್ಟ್ ಸೇರಿದಂತೆ ಮರುಬಳಕೆಯ ತ್ಯಾಜ್ಯದಿಂದ ವಾರ್ಷಿಕ ₹9 ಕೋಟಿ ಆದಾಯ ಬರುತ್ತಿದೆ’ ಎಂದು ಹೇಳಿದರು.

‘ರಾಮನಗರವನ್ನು ಸ್ವಚ್ಛ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಇಂದೋರ್ ಮಾದರಿಯಲ್ಲಿ ವಿವಿಧ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಪೂರಕವಾಗಿ ಪೌರ ಕಾರ್ಮಿಕರ ಕೊರತೆ, ತ್ಯಾಜ್ಯ ಸಂಗ್ರಹಕ್ಕೆ ಆಟೊ ಟಿಪ್ಪರ್ ಕೊರತೆ ಸೇರಿದಂತೆ ಇತರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಾಗುತ್ತಿದೆ. ಮೊದಲಿಗೆ ಜನರಲ್ಲಿ ಸ್ವಚ್ಛತಾ ಅರಿವು ಮೂಡಿಸುವುದು, ಎಲ್ಲೆಂದರಲ್ಲಿ ಕಸ ಎಸೆಯದೆ ಮನೆ ಎದುರಿಗೆ ಬರುವ ವಾಹನಕ್ಕೆ ಕಸ ನೀಡುವುದು, ವಿಂಗಡಣೆಗೆ ಒತ್ತು ನೀಡುವ ಕುರಿತು ನಿರಂತರವಾಗಿ ಜಾಗೃತಿ ಉಂಟು ಮಾಡಲಾಗುವುದು’ ಎಂದರು.

‘ನಗರಸಭೆಯ ಸ್ವಚ್ಛತಾ ಸಂಕಲ್ಪಕ್ಕೆ ನಗರದಲ್ಲಿರುವ ಸಂಘ–ಸಂಸ್ಥೆಗಳು ಹಾಗೂ ಸಂಘಟನೆಗಳನ್ನು ಒಳಗೊಳ್ಳಲಾಗುವುದು. ಬ್ಲ್ಯಾಕ್ಸ್ಪಾಟ್ಗಳನ್ನು ಶೂನ್ಯಕ್ಕಿಳಿಸಿ, ಎಲ್ಲೆಡೆ ಸಿಸಿಟಿವಿ ನಿಗಾ ಇಡಲಾಗುವುದು. ನಿಯಂತ್ರಣ ಕೊಠಡಿ ಮೂಲಕ ಎಲ್ಲವನ್ನು ನಿರ್ವಹಣೆ ಮಾಡಲಾಗುವುದು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವವರ ಹಾಗೂ ನಿಯಮ ಮೀರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಪರಿಸರ ಎಂಜಿನಿಯರ್ ಸುಬ್ರಹ್ಮಣ್ಯ ಅವರು ಇಂದೋರ್ ನಗರದ ಸ್ವಚ್ಛತಾ ಕ್ರಮಗಳ ವಿಡಿಯೊ ಪ್ರಾತ್ಯಕ್ಷಿಕೆ ನೀಡಿ ವಿವರಿಸಿದರು. ನಗರಸಭೆ ಕಚೇರಿಯಲ್ಲಿ ನವೀಕರಿಸಿರುವ ಹೈಟೆಕ್ ಶೌಚಾಲಯಗಳನ್ನು ಶಶಿ ಉದ್ಘಾಟಿಸಿದರು. ಸುದ್ದಿಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಸದಸ್ಯರಾದ ಪವಿತ್ರ, ಸೋಮಶೇಖರ್ (ಮಣಿ), ಜಯಲಕ್ಷ್ಮಮ್ಮ, ಗ್ಯಾಬ್ರಿಯಲ್, ಮಹಾಲಕ್ಷ್ಮಿ, ಅಜ್ಮತ್ಉಲ್ಲಾ ಖಾನ್, ಗೋವಿಂದರಾಜು, ನರಸಿಂಹ, ಸಮದ್, ಪದ್ಮ, ಸೈಯದ್ ಮುನಜಿಲ್ ಆಗಾ, ಆಯಿಷಾ ಬಾನು, ಕಂದಾಯ ನಿರೀಕ್ಷಕ ಆರ್. ನಾಗರಾಜು ಹಾಗೂ ಇತರರು ಇದ್ದರು.

- ಫ್ಲೆಕ್ಸ್ ನಿಯಮ ಬಿಗಿ; ಜಾಗೃತಿಗೆ ಚಿತ್ರ ಹಬ್ಬ–ಹರಿದಿನ ಉತ್ಸವ ಜನ್ಮದಿನ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಶುಭಾಶಯ ಕೋರಿ ನಗರದ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಅಳವಡಿಸುವುದಕ್ಕೆ ಮುಂಚೆ ನಗರಸಭೆ ಅನುಮತಿ ಪಡೆಯವುದು ಕಡ್ಡಾಯ. ಆದರೂ ಕೆಲವರು ಅನುಮತಿ ಇಲ್ಲದೆ ಫ್ಲೆಕ್ಸ್ ಅಳವಡಿಸುತ್ತಿದ್ದಾರೆ. ಇನ್ಮುಂದೆ ಅದಕ್ಕೆ ಅವಕಾಶ ನೀಡುವುದಿಲ್ಲ.

ಅಧಿಕಾರಿಗಳು ಯಾವುದೇ ಒತ್ತಡಕ್ಕೂ ಮಣಿಯದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದ್ದಾರೆ. ಜೊತೆಗೆ ಸ್ವಚ್ಛತೆ ಕುರಿತು ಅರಿವು ಮೂಡಿಸಲು ನಗರದ ಗೋಡೆಗಳಲ್ಲಿ ಸ್ವಚ್ಛತೆ ಜಾಗೃತಿ ಕುರಿತು ಚಿತ್ರ ಮಾಹಿತಿ ಬರಹ ನಗರದ ಹಿರಿಮೆ ನಮ್ಮ ಸಂಸ್ಕೃತಿ ಸಾರುವ ಚಿತ್ರಗಳನ್ನು ಬರೆಯಿಸಲಾಗುವುದು ಎಂದು ಶಶಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.