ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ ಮತ್ತು ಡಿವೈಎಸ್ಪಿ ಕೆ.ಸಿ. ಗಿರಿ ಮುಂದೆ ಮೃತ ರಮೇಶ್ ಅವರ ಪುತ್ರಿ ಮಂಜುಳಾ ಹಾಗೂ ಕುಟುಂಬದವರು ತಂದೆ ಸಾವಿಗೆ ನ್ಯಾಯಕ್ಕಾಗಿ ಅಂಗಲಾಚಿದರು
ಏಣಿ ವ್ಯಾಪಾರ ಮಾಡಬೇಕಿದೆ ಎಂದು ತಂದೆಯನ್ನು ಕರೆದೊಯ್ದಿರುವ ಪೊಲೀಸರೇ ತಂದೆಯನ್ನು ಹೊಡೆದು ಸಾಯಿಸಿದ್ದಾರೆ. ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುತ್ತಿದ್ದಾರೆ. ಇದನ್ನು ನಾವು ಹೇಗೆ ನಂಬೋದು. ನಮಗೆ ನ್ಯಾಯ ಬೇಕು
– ಮಂಜುಳಾ ಮೃತ ರಮೇಶ್ ಅವರ ಪುತ್ರಿ
ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿದ್ದ ರಮೇಶ್ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಠಾಣೆ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗಿದ್ದು ಅವರಿಂದ ಯಾವುದೇ ನಿರ್ಲಕ್ಷ್ಯ ಕಂಡುಬಂದಿಲ್ಲ. ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದ್ದು ತನಿಖೆಯಲ್ಲಿ ಸತ್ಯ ಗೊತ್ತಾಗಲಿದೆ