ಬುಧವಾರ, ಜೂನ್ 16, 2021
23 °C

ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಜನಸಂದಣಿ: ಪೊಲೀಸರ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಕೊರೊನಾ ನಿಯಮವನ್ನು ಪಾಲನೆ ಮಾಡದೆ ಗುಂಪುಕಟ್ಟಿಕೊಂಡಿದ್ದ ಜನರನ್ನು ಹೊರಗಡೆ ಕಳಿಸಿದ ಪೊಲೀಸರು ಕೇಸು ದಾಖಲಿಸುವ ಎಚ್ಚರಿಕೆ ನೀಡಿದರು.

ಇಲ್ಲಿನ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಗುರುವಾರ ಬೆಳಿಗ್ಗೆ ನೂರಾರು ಸಂಖ್ಯೆಯಲ್ಲಿ ಕ್ರಯ ನೋಂದಣಿ ಮಾಡಿಸಲು ಬಂದಿದ್ದ ಜನರು ಕಚೇರಿ ಒಳಗೆ ಗುಂಪು ಕಟ್ಟಿಕೊಂಡಿದ್ದನ್ನು ಕಂಡು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸರ್ಕಲ್‌ ಇನ್‌ಸ್ಪೆಕ್ಟರ್‌ ಟಿ.ಟಿ.ಕೃಷ್ಣ ಮತ್ತು ಸಬ್‌ಇನ್‌ಸ್ಪೆಕ್ಟರ್‌ ಲಕ್ಷ್ಮಣ್‌ಗೌಡ ನೋಂದಣಿ ಕಚೇರಿಗೆ ಭೇಟಿ ನೀಡಿ, ಜನರನ್ನು ಕಚೇರಿಯಿಂದ ಹೊರ ಕಳುಹಿಸಿದರು. ಸರ್ಕಾರದ ನಿಯಮದಂತೆ ಒಬ್ಬೊಬ್ಬರಾಗಿ  ನೋಂದಣಿ ಮಾಡಬೇಕು. ಒಳಗೆ ಬರುವವರಿಗೆ ಕಡ್ಡಾಯ ಸೋಂಕು ತಪಾಸಣೆ ಪತ್ರವನ್ನು ಪಡೆಯಬೇಕೆಂದು ಹೇಳಿದರು.

ಮತ್ತೆ ಜನರ ಗುಂಪು ಸೇರಿದ್ದು ಕಂಡು ಬಂದರೆ ಕಾನೂನು ಉಲ್ಲಂಘನೆಯಡಿ ಉಪ ನೋಂದಾವಣಾಧಿಕಾರಿ ಮೇಲೆ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದರು.

ಸರ್ಕಾರದ ಎಡವಟ್ಟು: ಸರ್ಕಾರವು ಕೊರೊನಾ ಸೋಂಕು ನಿಯಂತ್ರಣಕ್ಕೆ ಅಗತ್ಯ ವಸ್ತುಗಳಿಗೆ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಅವಕಾಶ ನೀಡಿ ಉಳಿದಂತೆ ಎಲ್ಲಾ ಸರ್ಕಾರಿ ಇಲಾಖೆಗಳ ಕಚೇರಿಯನ್ನು ಬೆಳಿಗ್ಗೆ 10 ರಿಂದ 5 ಗಂಟೆವರೆಗೆ ಅವಕಾಶ ಕೊಟ್ಟಿದೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ಸರ್ಕಾರವೇ ಅವಕಾಶ ಕೊಟ್ಟಂತೆ ಆಗಿದೆ. ಇದರಿಂದ ಸೋಂಕು ತಡೆಗೆ ಯಾವುದೆ ಪ್ರಯೋಜವಾಗಲ್ಲ, ಇದು ಸರ್ಕಾರದ ಎಡವಟ್ಟು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.