ಸೋಮವಾರ, ಮೇ 16, 2022
29 °C

ಪೆಟ್ರೋಲ್‌ ಇಲ್ಲದೆ ಸವಾರರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗಡಿ: ತಾಲ್ಲೂಕಿನ ಕೆಲವು ಬಂಕ್‌ಗಳಲ್ಲಿ ಪೆಟ್ರೋಲ್‌ ಇಲ್ಲದೆ ವಾಹನ ಸವಾರರು ಪರದಾಡಿದರು.

ಪಟ್ಟಣದ ಬಿ.ಕೆ. ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ಮೂರು ಬಂಕ್‌ಗಳಲ್ಲಿ ಪೆಟ್ರೋಲ್‌ ಇರಲಿಲ್ಲ. ಆಯುಧಪೂಜೆ, ವಿಜಯದಶಮಿ ಅಂಗವಾಗಿ ಪೆಟ್ರೋಲ್‌ ಟ್ಯಾಂಕರ್‌ಗಳು ಸಂಚರಿಸಿರಲಿಲ್ಲ. ಇದರಿಂದ ಪೂರೈಕೆ ಸ್ಥಗಿತಗೊಂಡಿದೆ ಎಂದು ಬಂಕ್‌ ವ್ಯವಸ್ಥಾಪಕರು ತಿಳಿಸಿದರು. ವಾಹನ ಚಾಲಕರು, ಮಾಲೀಕರು ಬಂಕ್‌ ಮಾಲೀಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣ ಮತ್ತು ಇತರೆಡೆ ಇರುವ ಪೆಟ್ರೋಲ್‌ ಬಂಕ್‌ಗಳಲ್ಲಿ ಅಳತೆ ಮಾಪನ ಸರಿಯಿಲ್ಲ. ಕೇಳಿದರೆ ಸಬೂಬು ಹೇಳುತ್ತಿದ್ದು, ಗ್ರಾಹಕರಿಗೆ ವಂಚನೆಯಾಗುತ್ತಿದೆ. ಅಳತೆ ಮಾಡಬೇಕಾದ ಅಧಿಕಾರಿಗಳು ಸಹ ಪೆಟ್ರೋಲ್‌ ಬಂಕ್‌ ಮಾಲೀಕರೊಂದಿಗೆ ಶಾಮೀಲಾಗಿದ್ದಾರೆ ಎಂದು ವಾಹನ ಸವಾರರು ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.