ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ: ಸ್ಕೂಟರ್‌ನಲ್ಲಿಟ್ಟಿ ₹2 ಲಕ್ಷ ಕಳವು

Published 3 ಮಾರ್ಚ್ 2024, 12:54 IST
Last Updated 3 ಮಾರ್ಚ್ 2024, 12:54 IST
ಅಕ್ಷರ ಗಾತ್ರ

ಕನಕಪುರ: ಮಗಳ ಮದುವೆಗೆಂದು ಬ್ಯಾಂಕ್‌ನಲ್ಲಿದ್ದ ಇಟ್ಟಿದ್ದ ₹2ಲಕ್ಷ ಹಣವನ್ನು ಡ್ರಾ ಮಾಡಿ ಸ್ಕೂಟರ್‌ನಲ್ಲಿಟ್ಟು ಮತ್ತೊಂದು ಬ್ಯಾಂಕ್‌ನಲ್ಲಿ ಕೆಲಸಕ್ಕೆಂದು ಹೋದ ಸಂದರ್ಭದಲ್ಲಿ ಹಣ ಕಳವು ಮಾಡಲಾಗಿದೆ.  

ಅಳ್ಳಿಮಾರನಹಳ್ಳಿ ವೆಂಕಟೇಶ್ ಹಣ ಕಳೆದುಕೊಂಡವರು. ಅವರು ಶನಿವಾರ ಮಧ್ಯಾಹ್ನ ಬೂದಿಕೆರೆ ರಸ್ತೆಯಲ್ಲಿರುವ ಐಡಿಬಿಐ ಬ್ಯಾಂಕ್‌ನಲ್ಲಿ ₹2ಲಕ್ಷ ಡ್ರಾ ಮಾಡಿಕೊಂಡು ಅದನ್ನು ತಮ್ಮ ಸ್ಕೂಟರ್‌ನಲ್ಲಿಟ್ಟು ಬಿಡಿಸಿಸಿ ಬ್ಯಾಂಕ್‌ಗೆ ಹೋಗಿದ್ದಾರೆ.

ಬಿಡಿಸಿಸಿ ಬ್ಯಾಂಕ್‌ನಲ್ಲಿ ಅರ್ಜಿ ಸಲ್ಲಿಸಿ ದಾಖಲಾತಿಗಳಿಗೆ ಸಹಿ ಮಾಡಿ ಕೆಳಗೆ ಇಳಿದು ಬಂದು ಸ್ಕೂಟರ್‌ ನೋಡಿದ್ದಾರೆ. ಸ್ಕೂಟರ್‌ ಡಿಕ್ಕಿ ಓಪನ್‌ ಹಾಗಿದ್ದು ಅದರಲ್ಲಿದ್ದ ₹2ಲಕ್ಷ ಹಣ ಕಳ್ಳತನ ಆಗಿರುವುದು ತಿಳಿದು ಬಂದಿದೆ. ತಕ್ಷಣವೇ ಅವರು ಬ್ಯಾಂಕ್‌ಗೆ ಹೋಗಿ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಮೂವರು ಕಳ್ಳರು ಡಿಕ್ಕಿ ತೆಗೆದು ಹಣ ಕದ್ದಿರುವುದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT