ಕುದೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದ್ವಿಚಕ್ರ ವಾಹನಗಳು ಕಳ್ಳತನವಾಗಿರುವ ಕುರಿತು ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೋಲೂರಿನ ಬಸ್ ನಿಲ್ದಾಣದಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿ ಕೆಲಸಕ್ಕೆ ತೆರಳಿ ವಾಪಸ್ ಬರುವ ವೇಳೆಗೆ ₹ 25 ಸಾವಿರ ಬೆಲೆಬಾಳುವ ವಾಹನ ಕಳ್ಳತನವಾಗಿದೆ ಎಂದು ಕುದೂರು ಹೋಬಳಿಯ ಲಕ್ಕಯ್ಯನಪಾಳ್ಯ ಗ್ರಾಮದ ಮಲ್ಲೇಶ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಿಪ್ಪಸಂದ್ರ ಹೋಬಳಿಯ ನೇರಳೇಕೆರೆ ಕಾಲೋನಿಯ ಮನೆ ಮುಂದೆ ರಾತ್ರಿ ವೇಳೆ ನಿಲ್ಲಿಸಲಾಗಿದ್ದ ₹ 1.20ಲಕ್ಷ ಬೆಲೆಬಾಳುವ ಬುಲೆಟ್ ಬೈಕ್ ಕಳ್ಳತನವಾಗಿದೆ ಎಂದು ತಿಪ್ಪಸಂದ್ರ ಗ್ರಾಮದ ಹನುಮಂತರಾಜು ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.