ಗುರುವಾರ , ಫೆಬ್ರವರಿ 9, 2023
30 °C

ದೇಗುಲ ಮಠದ ವಿದ್ಯಾರ್ಥಿನಿಲಯದಿಂದ ಮೂವರು ವಿದ್ಯಾರ್ಥಿಗಳು ನಾಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ (ರಾಮನಗರ): ಇಲ್ಲಿನ ದೇಗುಲಮಠದ ನಿರ್ವಾಣೇಶ್ವರ ಪ್ರೌಢಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳು ನ.8 ರಿಂದ ನಾಪತ್ತೆಯಾಗಿದ್ದಾರೆ.

ಆನೇಕಲ್ ತಾಲ್ಲೂಕು ಅತ್ತಿಬೆಲೆಯ ಎ.ಎಸ್‌. ಶಿವಕುಮಾರ್, ಕೋಡ್ಲಿಪುರದ ಎಂ.ಪ್ರತಾಪ್ ಮತ್ತು ಬೆಂಗಳೂರು ಉತ್ತರ ತಾಲ್ಲೂಕಿನ ಬಿಡಿಎಲ್‌ ಲೇಔಟ್ ಎಂ.ಕಾರ್ತಿಕ್ ಕಾಣೆಯಾದ ವಿದ್ಯಾರ್ಥಿಗಳು.  

‘ದೇಗುಲಮಠದ ನಿರ್ವಾಣೇಶ್ವರಸ್ವಾಮಿ ವಸತಿ ನಿಲಯದಲ್ಲಿದ್ದ ವಿದ್ಯಾರ್ಥಿಗಳು ನ. 8 ರಂದು ತಿಂಡಿ ತಿಂದು ಶಾಲೆಗೆ ಹೋಗುವುದಾಗಿ ಹೇಳಿ ಹೋದವರು ಮರಳಿ ಬಂದಿಲ್ಲ. ವಿದ್ಯಾರ್ಥಿಗಳ ಪೋಷಕರಿಗೆ ಕರೆ ಮಾಡಿ ವಿಚಾರಿಸಿದಾಗ ಅವರು ಅಲ್ಲಿಗೂ ಹೋಗಿಲ್ಲ ಎಂದು ತಿಳಿದು ಬಂದಿದೆ. ಎಲ್ಲ ಕಡೆ ಹುಡುಕಾಡಿ ಕೊನೆಗೆ ಶುಕ್ರವಾರ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ’  ಎಂದು ವಸತಿ ನಿಲಯದ ಮೇಲ್ವಿಚಾರಕ ಮಹದೇವಸ್ವಾಮಿ  ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.