ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯ ದಂಪತಿಗೆ ಸೋಂಕು: ಚಿಕಿತ್ಸೆ ಪಡೆದವರಿಗೂ ಆತಂಕ

Last Updated 18 ಜೂನ್ 2020, 14:42 IST
ಅಕ್ಷರ ಗಾತ್ರ

ಕನಕಪುರ: ತಾಲ್ಲೂಕಿನಲ್ಲಿ ಗುರುವಾರದ ವೇಳೆಗೆ 6 ಮಂದಿಗೆ ಹೊಸದಾಗಿ ಕೋವಿಡ್‌ –19 ದೃಢಪಟ್ಟಿದ್ದು ಒಟ್ಟು 9 ಪ್ರಕರಣಗಳು ದಾಖಲಾಗಿವೆ.

ಕೊರೊನಾ ಬಂದಿರುವ ವ್ಯಕ್ತಿಗಳು ಖಾಸಗಿ ಆಸ್ಪತ್ರೆ ವೈದ್ಯರಾಗಿದ್ದು ಇಬ್ಬರನ್ನು ಕ್ವಾರಂಟೈನ್‌ ಮಾಡಲಾಗಿದೆ.

ವಿವೇಕಾನಂದ ನಗರದಲ್ಲಿ 3 ಮಂದಿ ಮತ್ತು ಮರಳವಾಡಿಯಲ್ಲಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಇವರನ್ನು ಕ್ವಾರಂಟೈನ್‌ ಚಿಕಿತ್ಸಾ ಸೆಂಟರ್‌ಗೆ ಸೇರಿಸಲಾಗಿದೆ.

ಕೊರೊನಾ ಬಾಧಿತರು ವಾಸವಿದ್ದ ಎಂಎಚ್‌ಎಸ್‌ ಗ್ರೌಂಡ್‌ ಮತ್ತು ವಿವೇಕಾನಂದ ನಗರದ ಪ್ರದೇಶ ಸೀಲ್‌ಡೌನ್‌ ಮಾಡಲಾಗಿದೆ.

ಸೋಂಕು ಪತ್ತೆಯಾಗಿರುವವರ ಜತೆ ನೇರ ಸಂಪರ್ಕದಲ್ಲಿದ್ದವರ ಮಾಹಿತಿ ಸಂಗ್ರಹಿಸಿ ಅವರನ್ನು ಕ್ವಾರಂಟೈನ್‌ ಮಾಡಲಾಗಿದೆ.

ಮನವಿ: ನಗರಸಭಾ ವ್ಯಾಪ್ತಿಯ ಕೆಎನ್‌ಎಸ್‌ ಸರ್ಕಲ್‌ ಬಳಿಯ ನವೋದಯ ಆರೋಗ್ಯ ಕೇಂದ್ರದಲ್ಲಿ ವೈದ್ಯ ದಂಪತಿಗೆ ಕೋವಿಡ್‌ –19 ದೃಢಪಟ್ಟಿರುವ ಹಿನ್ನೆಲೆಯಲ್ಲಿ ಜೂನ್‌ 6 ರಿಂದ ಈವರೆಗೂ ಚಿಕಿತ್ಸೆ ಪಡೆದಿರುವ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಪರೀಕ್ಷೆಗೆ ಒಳಗಾಗಬೇಕೆಂದು ನಗರಸಭೆ ಆಯುಕ್ತ ಕೆ.ಮಾಯಣ್ಣಗೌಡ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT