ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರು ಅಪರಿಚಿತರ ಸಾವು

Published 22 ಮೇ 2024, 5:18 IST
Last Updated 22 ಮೇ 2024, 5:18 IST
ಅಕ್ಷರ ಗಾತ್ರ

ಚನ್ನಪಟ್ಟಣ: ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಮೃತಪಟ್ಟಿರುವ ಘಟನೆ ಚನ್ನಪಟ್ಟಣ ರೈಲ್ವೆ ಪೊಲೀಸ್ ಹೊರ ಉಪಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ತಾಲ್ಲೂಕಿನ ಶೆಟ್ಟಿಹಳ್ಳಿ ರೈಲ್ವೆ ಪ್ಲಾಟ್ ಫಾರಂನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಶನಿವಾರ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಸುಮಾರು 40 ರಿಂದ 45 ವರ್ಷ ವಯಸ್ಸಿನ ಇವರು 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ ಹೊಂದಿದ್ದಾರೆ. ಮೈಮೇಲೆ ಒಂದು ಕಡುನೀಲಿ ಬಣ್ಣದ ತುಂಬುತೋಳಿನ ರೆಡಿಮೇಡ್ ಶರ್ಟ್, ಮತ್ತೊಂದು ಕಪ್ಪುಬಣ್ಣದ ತುಂಬುತೋಳಿನ ಶರ್ಟ್, ನೀಲಿಬಣ್ಣದ ಜೀನ್ಸ್ ಪ್ಯಾಂಟ್ ಇದೆ.

ಬಲಗೈ ಮೇಲೆ ಅಮ್ಮ ಎಂಬ ಅಚ್ಚೆ ಗುರುತು, ಎದೆಭಾಗದಲ್ಲಿ ಶಶಾಂಕ್, ಸಿದ್ಧಾರ್ಥ್, ಗೌರಮ್ಮ, ಕಾವ್ಯ ಸೇರಿದಂತೆ ಹಲವು ಹಚ್ಚೆ ಗುರುತುಗಳಿವೆ.

ಮತ್ತೊಂದು ಪ್ರಕರಣದಲ್ಲಿ ಮೇ 16ರಂದು ಅಪರಿಚಿತ ಮಹಿಳೆಯೊಬ್ಬರು ರಾಮನಗರ ಬಿಡದಿ ಮಧ್ಯೆ ಹಲಸಿನಮರದದೊಡ್ಡಿ ಸಮೀಪ ರೈಲಿಗೆ ಸಿಲುಕಿ ಗಾಯಗೊಂಡು ರಾಮನಗರ ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಸುಮಾರು 40 ರಿಂದ 45 ವರ್ಷ ವಯಸ್ಸಿನ ಇವರು 5 ಅಡಿ ಎತ್ತರ, ದೃಢಕಾಯ ಶರೀರ, ಎಣ್ಣೆಗೆಂಪು ಬಣ್ಣ, ದುಂಡುಮುಖ ಹೊಂದಿದ್ದಾರೆ. ಮೃತರ ಬಲಗೈ ಮೇಲೆ ರುದ್ರಕುಮಾರ್ ಎಂದು ಕನ್ನಡದಲ್ಲಿ ಹಾಗೂ ಜಿ.ಎಲ್.ಎನ್.ಆರ್. ಎಂದು ಆಂಗ್ಲಭಾಷೆಯಲ್ಲಿ ಬರೆದಿರುವ ಹಚ್ಚೆ ಗುರುತುಗಳಿವೆ. ಮೈಮೇಲೆ ಕಿತ್ತಳೆ ಬಣ್ಣದ ಹೂವಿನ ಆಕಾರವಿರುವ ಉಂಬುತೋಳಿನ ಟಾಪ್ ಹಾಗೂ ಕೆಂಪುಬಣ್ಣದ ಲೆಗಿನ್ಸ್ ಇದೆ.

ವಾರಸುದಾರರು ರೈಲ್ವೆ ಪೊಲೀಸ್ ಠಾಣೆ ದೂ.ಸಂ. 080 871291 ಅಥವಾ 9480802113 ಅನ್ನು ಸಂಪರ್ಕಿಸಲು ರೈಲ್ವೆ ಪೊಲೀಸರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT