ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಳ ಸೇತುವೆ, ಸುರಕ್ಷಿತ ರಸ್ತೆ ನಿರ್ಮಾಣಕ್ಕೆ ಒತ್ತಾಯ

Published 12 ಸೆಪ್ಟೆಂಬರ್ 2023, 3:17 IST
Last Updated 12 ಸೆಪ್ಟೆಂಬರ್ 2023, 3:17 IST
ಅಕ್ಷರ ಗಾತ್ರ

ಹಾರೋಹಳ್ಳಿ: ರಾಷ್ಟ್ರೀಯ ಹೆದ್ದಾರಿ 209 ಗಾಣಾಳು ದೊಡ್ಡಿ ಗ್ರಾಮಕ್ಕೆ ಹೋಗುವ ರಸ್ತೆಯ ಬಳಿ ಕೆಳಸೇತುವೆ ಮತ್ತು ಸರ್ವಿಸ್‌ ರಸ್ತೆ ನಿರ್ಮಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಹಾರೋಹಳ್ಳಿ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 209 ಕನಕಪುರ-ಹಾರೋಹಳ್ಳಿ ಗಾಣಾಳುದೊಡ್ಡಿ ಗ್ರಾಮಕ್ಕೆ ಹೋಗುವ ರಸ್ತೆ ಬಳಿ ರಾಷ್ಟ್ರೀಯ ಹೆದ್ದಾರಿ 209ರ ರಸ್ತೆ ಕಾಮಗಾರಿ ನಡೆಯುತ್ತಿದೆ. ಇದರಿಂದ ಹಾರೋಹಳ್ಳಿ ಪಟ್ಟಣಕ್ಕೆ ಹೋಗಲು ಗಾಣಾಳು ದೊಡ್ಡಿ, ಗಿರೇನ ಹಳ್ಳಿ, ದಾಸಪ್ಪನ ದೊಡ್ಡಿ, ಹುಲ್ಲಿಸಿದ್ದೇಗೌಡನ ದೊಡ್ಡಿ, ಬನ್ನಿಕುಪ್ಪೆ, ಕುರುಬರಹಳ್ಳಿ, ಬೈರೇಗೌಡನ ವಲಸೆ ಹಾಗೂ ಸುತ್ತ ಮುತ್ತಲಿನ ಹಳ್ಳಿಗಳಿಗೆ ಹೋಗಲು ಇರುವ ಸಾಮಾನ್ಯ ರಸ್ತೆಗೆ ಅಡ್ಡಲಾಗಿ ರಸ್ತೆ ನಿರ್ಮಾಣವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಹಾರೋಹಳ್ಳಿ ಹಾಗೂ ಹತ್ತಾರು ಹಳ್ಳಿಗಳಿಗೆ ಸಂಪರ್ಕಿಸುವ ರಸ್ತೆಗೆ ಕೆಳ ಸೇತುವೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಶೇಷಾದ್ರಿರಾಮು ಮಾತನಾಡಿ, ಹಾರೋಹಳ್ಳಿ ಪಟ್ಟಣಕ್ಕೆ ಸಂದಿಸುವ ಈ ರಸ್ತೆಗೆ ಕೆಳಸೇತುವೆ ಅಥವಾ ಸುರಕ್ಷಿತ ರಸ್ತೆ ತಿರುವು ಮಾಡಬೇಕು. ಇದನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಬೇಕು ಎಂದು ಹಾರೋಹಳ್ಳಿ ತಹಶೀಲ್ದಾರ್ ವಿಜಯಣ್ಣ ಅವರ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಲಾಯಿತು ಎಂದರು.

ನರಸಿಂಹಯ್ಯ, ಅರವಿಂದ್ ಮಹೇಶ್, ಕೇಶವಮೂರ್ತಿ, ಚಿನ್ನೆಗೌಡ, ರಾಮಸ್ವಾಮಿ, ಶಿವರಾಜು, ಪ್ರಸನ್ನ, ವೆಂಕಟರಮಣ, ಪ್ರದೀಪ, ಶಂಕರ, ಲಕ್ಷ್ಮಣ, ಮೋಹನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT