ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಚ್ಚಾಸ್ಪತ್ರೆ ಆದ ವಿಧಾನಸೌಧ: ವಾಟಾಳ್‌ ಟೀಕೆ

Last Updated 4 ಜನವರಿ 2021, 13:25 IST
ಅಕ್ಷರ ಗಾತ್ರ

ರಾಮನಗರ: ಮುಖ್ಯಮಂತ್ರಿ ಯಡಿಯೂರಪ್ಪ ಹುಚ್ಚಾಸ್ಪತ್ರೆಯ ವಾರ್ಡಿನಲ್ಲಿ ಇರಬೇಕಿತ್ತು. ಅದರ ಬದಲಾಗಿ ವಿಧಾನಸೌಧದಲ್ಲಿ ಇದ್ದಾರೆ. ವಿಧಾನಸೌಧ ಹುಚ್ಚಾಸ್ಪತ್ರೆ ಆಗಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜು ಟೀಕಿಸಿದರು.

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ನಗರದ ಐಜೂರು ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು. ಬಿಜೆಪಿ ನಾಯಕರು ದಿಕ್ಕುತಪ್ಪಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿಲ್ಲ. ಬಿಎಸ್‍ವೈ ಅತ್ಯಂತ ಹೀನಾಯವಾದ ಹಾಗೂ ಕೆಳ ದರ್ಜೆಯ ಸರ್ಕಾರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.

ಇದೇ 6ರಂದು ಬಸವಕಲ್ಯಾಣದಲ್ಲಿ ಯಡಿಯೂರಪ್ಪ ಅನುಭವ ಮಂಟಪ ನಿರ್ಮಾಣಕ್ಕೆ ಅಡಿಗಲ್ಲು ಹಾಕುತ್ತಿದ್ದಾರೆ. ಆದರೆ ಇದು ಅಲ್ಲಮಪ್ರಭುಗಳ ಅನುಭವ ಮಂಟಪವಲ್ಲ, ಬದಲಾಗಿ ಯಡಿಯೂರಪ್ಪ ಅವರ ಅನುಭವ ಮಂಟಪ ಆಗುತ್ತದೆ. ಈ ತನಕ ಬಸವಣ್ಣ ಮತ್ತು ಬಸವ ಕಲ್ಯಾಣವನ್ನು ಮುಖ್ಯಮಂತ್ರಿ ಮರೆತಿದ್ದರು. ಇದು ಬಸವಣ್ಣ ಮತ್ತು ಬಸವ ಕಲ್ಯಾಣಕ್ಕೆ ಮಾಡುತ್ತಿರುವ ಅಪಚಾರ. ಇದನ್ನು ವಿರೋಧಿಸಿ ಇದೇ 6ರಂದು ಬೆಂಗಳೂರಿನಲ್ಲಿ ಬಸವಣ್ಣನ ಪ್ರತಿಮೆಯಲ್ಲಿ ಮಲಗಿ ಪ್ರತಿಭಟನೆ ನಡೆಸಲಾಗುವುದು ಎಂದರು.

ರೈಲು ಸತ್ಯಾಗ್ರಹ: ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಸಾಕಷ್ಟು ಹೋರಾಟ ಮಾಡಿವೆ. ಇದರ ಮುಂದುವರಿದ ಭಾಗವಾಗಿ ಇದೇ 9ರಂದು ರಾಜ್ಯದಲ್ಲಿ ರೈಲು ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕನಿಷ್ಠ ವೇತನ ನೀಡಿ: ಗ್ರಾಮ ಪಂಚಾಯಿತಿ ಸದಸ್ಯರನ್ನು ರಾಜ್ಯ ಸರ್ಕಾರ ಗುಲಾಮ ರೀತಿಯಲ್ಲಿ ಕಾಣಲಾಗುತ್ತಿದೆ. ಪೌರ ಕಾರ್ಮಿಕರಿಗಿಂತ ಕಡಿಮೆ ವೇತನ ನೀಡಲಾಗುತ್ತಿದೆ. ದಿನಕ್ಕೆ ಕೇವಲ 33 ಗೌರವ ಧನ ನೀಡಲಾಗುತ್ತಿದೆ. ಒಬ್ಬ ಸದಸ್ಯರಿಗೆ ಕನಿಷ್ಠ 10 ಸಾವಿರ ವೇತನ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.

ಸಂಘಟನೆಗಳ ಮುಖಂಡರಾದ ಜಗದೀಶ್, ಜಯಕುಮಾರ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT