ರಾಮನಗರ: ಕರ್ನಾಟಕ ಜಾನಪದ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಜಾನಪದ ಲೋಕದಲ್ಲಿ ಫೆ. 7 ಮತ್ತು 8ರಂದು ಎರಡು ದಿನ ‘ವಿದ್ಯಾರ್ಥಿ ಜಾನಪದ ಲೋಕೋತ್ಸವ-2026’ ಜರುಗಲಿದೆ.

7ರಂದು ಬೆಳಿಗ್ಗೆ 10.30ಕ್ಕೆ ಸಿನಿಮಾ ನಿರ್ದೇಶಕ ಹಾಗೂ ನಟ ಡಾ. ಟಿ.ಎಸ್. ನಾಗಾಭರಣ ಅವರು ಲೋಕೋತ್ಸವ ಉದ್ಘಾಟಿಸುವರು. ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ರಾಮನಗರ ಶಾಖಾ ಮಠಾಧೀಶ ಅನ್ನದಾನೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು ಅವರು ಕರಕುಶಲ ಮೇಳ ಉದ್ಘಾಟಿಸುವರು. ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಧ್ಯಕ್ಷತೆ ವಹಿಸುವರು. ಪರಿಷತ್ತಿನ ಅಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ ಪ್ರಾಸ್ತಾವಿಕ ಮಾತುಗಳನ್ನಾಡುವರು. ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಅತಿಥಿಗಳನ್ನು ಸ್ವಾಗತಿಸುವರು.

8ರಂದು ಬೆಳಿಗ್ಗೆ 10.30ಕ್ಕೆ ‘ಯುವಜನರಲ್ಲಿ ಜಾನಪದ ಗಾಯನ ಮತ್ತು ಕಲೆಗಳ ಸಂವರ್ಧನೆ’ ಎಂಬ ವಿಷಯ ಕುರಿತು ಚರ್ಚೆ-ಸಂವಾದ ಗೋಷ್ಠಿ ನಡೆಯಲಿದೆ. ಪರಿಷತ್ತಿನ ಅಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಜಾನಪದ
ವಿ.ವಿ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪಗೌಡ ಆಶಯ ನುಡಿಗಳನ್ನಾಡಲಿದ್ದಾರೆ. ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸತೀಶ್ ಪಾಲ್ಗೊಳ್ಳಲಿದ್ದಾರೆ. ಸಂವಾದದಲ್ಲಿ 40ಕ್ಕೂ ಹೆಚ್ಚು ವಿದ್ವಾಂಸರು ಮತ್ತು ಸಾಹಿತಿಗಳು ಭಾಗವಹಿಸಲಿದ್ದಾರೆ.

ಮಧ್ಯಾಹ್ನ 1.30ರಿಂದ 4ರವರೆಗೆ ಜಾನಪದ ಗೀತ ಗಾಯನೋತ್ಸವ ನಡೆಯಲಿದೆ. ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿಯಾಗಿದ್ದ ದಿ. ಎಚ್.ಎನ್. ನಂಜರಾಜ್ ಮತ್ತು ದಿ. ಇಂದಿರಾ ಬಾಲಕೃಷ್ಣ ಸ್ಮರಣಾರ್ಥ ಆಹ್ವಾನಿತ ಗ್ರಾಮೀಣ ಮೂಲ ಜಾನಪದ ಗಾಯಕರಿಂದ ಜನಪದ ಗೀತ ಗಾಯನೋತ್ಸವವು ನಡೆಯಲಿದೆ.

ಸಂಜೆ 4ರಿಂದ 4.30ರವರೆಗೆ ಬುಡಕಟ್ಟು ಕಲೆಗಳ ಆಕರ್ಷಣೆಯಾಗಿ ಸಿದ್ದಿಯರ ಡಮಾಮಿ ನೃತ್ಯ ಮತ್ತು ಸೋಲಿಗರ ನೃತ್ಯ ಪ್ರದರ್ಶನ ನಡೆಯಲಿದೆ. 4.30ರಿಂದ 5.30ರವರೆಗೆ ನಡೆಯಲಿರುವ ಆಧುನಿಕ ಗಾಯಕರ ಜಾನಪದ ಗೀತ ಸಂಭ್ರಮದಲ್ಲಿ ಡಾ. ಅಪ್ಪಗೆರೆ ತಿಮ್ಮರಾಜು, ಡಾ. ವೇಮಗಲ್ ನಾರಾಯಣಸ್ವಾಮಿ, ಸಿ.ಎಂ. ನರಸಿಂಹಮೂರ್ತಿ, ರಾಜಪ್ಪ ಕೋಲಾರ, ಚೈತ್ರ ಶಿವನಾಗ್ ಮತ್ತು ಸ್ಪಂದನ ಬಾಲು
ಗಾಯನ ನಡೆಸಿ ಕೊಡಲಿದ್ದಾರೆ.

ಸಂಜೆ 5.30ಕ್ಕೆ ಜಾನಪದ ಕಲಾವಿದರು ಮತ್ತು ವಿದ್ವಾಂಸರಿಗೆ ಪ್ರಶಸ್ತಿ ಪ್ರದಾನ ಜರುಲಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಲೇಖಕ ಹಾಗೂ ಆಂಧ್ರಪ್ರದೇಶದ ವಾಣಿಜ್ಯ ತೆರಿಗೆ ಇಲಾಖೆ ಪ್ರಧಾನ ಆಯಕ್ತ ಜಯರಾಮ್ ರಾಯಪುರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ರಾತ್ರಿ 7.30ರಿಂದ 9ರವರೆಗೆ ಮಂಡ್ಯ ಕರ್ನಾಟಕ ಸಂಘ ಪ್ರಸ್ತುತಪಡಿಸುವ ಮಕ್ಕಳ ಮೂಡಲಪಾಯ ಯಕ್ಷಗಾನ ‘ಕರ್ಣಾರ್ಜುನರ ಕಾಳಗ’ ಪ್ರಸಂಗ ಪ್ರದರ್ಶನ ನಡೆಯಲಿದೆ. ಎರಡು ದಿನಗಳಂದು ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ.

ರಾತ್ರಿವರೆಗೆ ಜಾನಪದ ಕಲಾ ಪ್ರದರ್ಶನ

ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 9.30ರವರೆಗೆ ರಾಜ್ಯದ ವಿವಿಧ ಭಾಗಗಳಿಂದ ಬರುವ ವಿದ್ಯಾರ್ಥಿ ಕಲಾವಿದರಿಂದ ಜಾನಪದ ನೃತ್ಯ ಕಲಾ ಪ್ರದರ್ಶನ ಹಾಗೂ ಗೀತಗಾಯನ ಇರಲಿದೆ. ಪ್ರಮುಖವಾಗಿ ನಗಾರಿ ಮೇಳ ವೀರಗಾಸೆ ಕುಣಿತ ಸೋಮನ ಕುಣಿತ ಕಂಗೀಲು ಕುಣಿತ ತಮಟೆ ವಾದನ ಸಂಬಾಳ ವಾದನ ಜಾನಪದ ಹಾಡಿಗೆ ನೃತ್ಯ ಬುಡಕಟ್ಟ್ಟು ಹಾಡಿಗೆ ನೃತ್ಯ ಕರಪಾಲ ಮೇಳ ಕಂಸಾಳೆ ಗಾರುಡಿ ಗೊಂಬೆ ಕೊಂಬು ಕಹಳೆ ಪಟಾ ಕುಣಿತ ಡೊಳ್ಳು ಕುಣಿತ ಹಗಲು ವೇಷ ವೀರಭದ್ರ ಕುಣಿತ ನೀಲಗಾರರ ಪದ ಸೇರಿದಂತೆ ವಿವಿಧ ಬಗೆಯ ಕಲಾ ಪ್ರದರ್ಶನ ಜರುಗಲಿದೆ. ರಾತ್ರಿ 8 ಗಂಟೆಗೆ ಜಾನಪದ ಲೋಕದ ಜನಪದ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಬೈರ್ನಳ್ಳಿ ಶಿವರಾಮು ನಿರ್ದೇಶನದ ‘ಕೆರೆಗೆ ಹಾರ’ ಜಾನಪದ ರೂಪಕ ಪ್ರದರ್ಶನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.