ಮಂಗಳವಾರ, ಜೂನ್ 28, 2022
25 °C

ಕೋವಿಡ್‌ಗೆ ಪತಿ ಬಲಿ: ಪತ್ನಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ಇಲ್ಲಿನ ಬಸವೇಶ್ವರ ನಗರದಲ್ಲಿ ಪತಿಯ ಸಾವಿನಿಂದ ಮನನೊಂದ ಮೂರು ತಿಂಗಳ ಗರ್ಭಿಣಿಯಾಗಿದ್ದ ಪತ್ನಿ ಗುರುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಬೆಸ್ಕಾಂ ವಿಭಾಗೀಯ ಕಚೇರಿಯಲ್ಲಿ ಸಹಾಯಕರಾಗಿದ್ದ ನಂದಿನಿ (28) ಆತ್ಮಹತ್ಯೆ ಮಾಡಿಕೊಂಡವರು. 

ತಂದೆ ಶಾಂತಮಲ್ಲಪ್ಪ ಅವರು ಕೆಇಬಿಯಲ್ಲಿ ಲೈನ್‌ಮನ್‌ ಆಗಿದ್ದು, ಕೆಲಸದಲ್ಲಿ ಇರುವಾಗಲೇ ತೀರಿಕೊಂಡಿ
ದ್ದರು. ಅನುಕಂಪದ ಆಧಾರದ ಮೇಲೆ ನಂದಿನಿ ಅವರಿಗೆ 3 ವರ್ಷಗಳ ಹಿಂದೆ ಬೆಸ್ಕಾಂನಲ್ಲಿ ತಂದೆಯ ಕೆಲಸ ಸಿಕ್ಕಿತ್ತು.

ಎರಡು ವರ್ಷದ ಹಿಂದೆ ಮೈಸೂರು ಮೂಲದ ಉದ್ಯಮಿ ಸತೀಶ್‌ ಎಂಬುವರನ್ನು ಪ್ರೀತಿಸಿ ವಿವಾಹವಾಗಿದ್ದರು. ಇಲ್ಲಿನ ಬಸವೇಶ್ವರ ನಗರದಲ್ಲಿ ಮನೆ ಮಾಡಿಕೊಂಡು ನೆಲೆಸಿದ್ದರು. ಸತೀಶ್‌ ತಾಯಿ ಮೈಸೂರಿನಲ್ಲಿ ನೆಲೆಸಿದ್ದರು.

ಒಂದು ವಾರದ ಹಿಂದೆ ಸತೀಶ್‌ ತಾಯಿ ಕೊರೊನಾ ಸೋಂಕಿಗೆ ಬಲಿಯಾಗಿದ್ದರು. ಸತೀಶ್‌ಗೂ  ಸೋಂಕು ದೃಢಪಟ್ಟು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮೂರು ದಿನಗಳ ಹಿಂದೆಯಷ್ಟೇ ಮೃತಪಟ್ಟಿದ್ದರು. ಪತಿಯ ಸಾವಿನ ನಂತರ ನಂದಿನಿ ಮಾನಸಿಕವಾಗಿ ನೊಂದಿದ್ದರು. ಗುರುವಾರ ಮಧ್ಯಾಹ್ನ ಸುಮಾರು 1 ಗಂಟೆಯಲ್ಲಿ ರೂಂನಲ್ಲಿ ಕೆಲಸವಿದೆ ಎಂದು ಹೇಳಿ ಹೋಗಿದ್ದಾರೆ. ಬಹಳ ಸಮಯವಾದರೂ ಹೊರಗೆ ಬಂದಿಲ್ಲವೆಂದು ಆತಂಕಗೊಂಡ ತಾಯಿ ಮತ್ತು ತಂಗಿಯರು ರೂಮಿನ ಒಳಗೆ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು