ಶುಕ್ರವಾರ, ಜನವರಿ 24, 2020
28 °C

ಊಟದಲ್ಲಿ ವಿಷ ಬೆರೆಸಿ ಪತ್ನಿ ಕೊಂದ ಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ರಾಮನಗರ: ಊಟದಲ್ಲಿ ವಿಷ ಬೆರೆಸಿ ಪತಿಯೇ ಪತ್ನಿಯನ್ನು ಕೊಂದ ಘಟನೆ ಇಲ್ಲಿನ ಹನುಮಂತ ನಗರದಲ್ಲಿ ನಡೆದಿದೆ.

ದೀಪಾ (24) ಮೃತ ಮಹಿಳೆ. ಆರೋಪಿ ವೆಂಕಟೇಶ್‌ (30) ನನ್ನು ಪೊಲೀಸರು ಬಂಧಿಸಿದ್ದಾರೆ.

11 ತಿಂಗಳ ಹಿಂದಷ್ಟೇ ಇವರ ವಿವಾಹವಾಗಿತ್ತು. ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆದಿದ್ದು, ರಾಜೀ ಪಂಚಾಯಿತಿಯೂ ಆಗಿತ್ತು. ಸೋಮವಾರ ರಾತ್ರಿಯೂ ಇಬ್ಬರ ನಡುವೆ ಜಗಳವಾಗಿತ್ತು. ಇದರಿಂದ ಕುಪಿತನಾಗಿದ್ದ ಪತಿ ಊಟದಲ್ಲಿ ವಿಷ ಬೆರೆಸಿದ್ದ. ಇದನ್ನು ಸೇವಿಸಿ ದೀಪಾ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದರು.

ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು