ಬುಧವಾರ, ಸೆಪ್ಟೆಂಬರ್ 29, 2021
20 °C

ಮನೆಗೆ ನುಗ್ಗಿ ಟಿ.ವಿ ಪುಡಿಪುಡಿ ಮಾಡಿದ ಕಾಡು ಹಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ತಾಲ್ಲೂಕಿನ ಡಣಾಯಕನಪುರ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಕಾಡು ಹಂದಿಯೊಂದು ಮನೆಗೆ ನುಗ್ಗಿ ದಾಂದಲೆ ನಡೆಸಿದೆ.

ರಾತ್ರಿ ಸಣ್ಣಮ್ಮ ಎಂಬುವರ ಮನೆಯ ಕೊಟ್ಟಿಗೆಯ ಬಾಗಿಲಿನ ಮೂಲಕ ಒಳ ಪ್ರವೇಶಿಸಿದ ಹಂದಿಯು ನೇರ ಹಾಲ್‌ಗೆ ಬಂದಿದೆ. ಅಲ್ಲಿ ಗಾಬರಿಯಿಂದ ಮನೆಗೆ ಎಲ್ಇಡಿ ಟಿ.ವಿ.ಗೆ ಗುದ್ದಿದ್ದು, ಟಿ.ವಿ. ಪುಡಿಪುಡಿಯಾಗಿ ಅದರ ಗಾಜುಗಳು ಹಂದಿಗೆ ಚುಚ್ಚಿ ರಕ್ತ ಚೆಲ್ಲಾಡಿದೆ. ಅಲ್ಲಿಂದ ಅಡುಗೆ ಕೋಣೆಗೆ ನುಗ್ಗಿದ ಹಂದಿಯು ಸಿಲಿಂಡರ್‌, ಪಾತ್ರೆ ಮೊದಲಾದ ವಸ್ತುಗಳನ್ನು ಬೀಳಿಸಿದೆ. ಶಬ್ದ ಕೇಳುತ್ತಲೇ ಮನೆ ಮಂದಿ ಎಚ್ಚೆತ್ತಿದ್ದು, ಹಂದಿಯು ಬಾಗಿಲಿನ ಮೂಲಕ ಹೊರಗೆ ಹಾರಿ ಪರಾರಿಯಾಗಿತು. ಅದೃಷ್ಟವಶಾತ್‌ ಯಾರ ಮೇಲೂ ದಾಳಿ ನಡೆಸಲಿಲ್ಲ ಎಂದು ಸ್ಥಳೀಯರು ತಿಳಿಸಿದರು.

ಹಂದಿಯಿಂದ ಆದ ನಷ್ಟಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ಸಣ್ಣಮ್ಮರ ಕುಟುಂಬದವರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು