ಭಾನುವಾರ, ಫೆಬ್ರವರಿ 23, 2020
19 °C
ರಮಣ ಮಹರ್ಷಿ ಅಂಧರ ಶಾಲೆಯಲ್ಲಿ ಕಾರ್ಯಕ್ರಮ

ವಿಶ್ವ ಅಂಗವಿಲಕರ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮರಳವಾಡಿ (ಕನಕಪುರ): ಪರಿಸರದಲ್ಲಿ ಹೆಚ್ಚು ಹೆಚ್ಚು ಮರಗಿಡಗಳನ್ನು ಬೆಳೆಸುವುದರಿಂದ ಪ್ರಕೃತಿ ಸಮತೋಲನವಾಗಿ ಉತ್ತಮ ಮಳೆಯಾಗುತ್ತದೆ. ಪರಿಶುದ್ಧ ಗಾಳಿ ದೊರೆಯುತ್ತದೆ ಎಂದು ಬೆಂಗಳೂರು ರೋಟರಿ ಪಿಎಚ್‌ಎಫ್‌ ಸಂಯೋಜಕ ಎಡುಮಡು ಕಾಂತರಾಜು ತಿಳಿಸಿದರು.

ಇಲ್ಲಿನ ಮರಳವಾಡಿ ಹೋಬಳಿ ಜಕ್ಕಸಂದ್ರ ಬಳಿಯ ರಮಣ ಮಹರ್ಷಿ ಅಂದರ ಶಾಲೆಯಲ್ಲಿ ಹಾರೋಹಳ್ಳಿ ರೊಟರಿ ವತಿಯಿಂದ ಆಚರಣೆ ಮಾಡಿದ ವಿಶ್ವ ಅಂಗಲ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಿಹಿ ವಿತರಿಸಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಾರೋಹಳ್ಳಿ ರೋಟರಿಯು ವಿಶೇಷವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ನಡೆಸುತ್ತಿದ್ದು ಮಕ್ಕಳ ದಿನಾಚರಣೆ ಪ್ರಯುಕ್ತ ಆಶ್ರಮದ ಆವರಣದಲ್ಲಿ 1 ಸಾವಿರ ಸಸಿಗಳನ್ನು ನೆಡಲು ಕಾರ್ಯಕ್ರಮ ರೂಪಿಸಲಾಗಿದೆ.

ಒಂದು ಸಾವಿರ ಸಸಿಗಳನ್ನು ನೆಡಲು ಗುಂಡಿಯನ್ನು ತೋಡಿದ್ದು ಅರಣ್ಯ ಇಲಾಖೆಯು ಸಸಿಗಳನ್ನು ಕೊಟ್ಟ ತಕ್ಷಣ ಗಿಡಗಳನ್ನು ನೆಡುವುದಾಗಿ ಹೇಳಿದರು.

ರೋಟರಿ ಅಧ್ಯಕ್ಷ ಭರತ್‌ ಮತ್ತು ಮಾಜಿ ಅಧ್ಯಕ್ಷ ಮಹಮ್ಮದ್‌ ಏಜಾಸ್‌ ಮಾತನಾಡಿ, ‘ಆಶ್ರಮದಲ್ಲಿರುವ ಎಲ್ಲರೂ ವಿಶೇಷ ಮಕ್ಕಳಾಗಿದ್ದಾರೆ. ಯಾವ ಯೋಚನೆಯಿಲ್ಲದೆ ಮುಗ್ಧತೆಯಿಂದ ಇರುವ ಮಕ್ಕಳು ದೇವರ ಸಮಾನರಾಗಿದ್ದು, ಇವರ ಬಾಳಲ್ಲೂ ಸಂಭ್ರಮ ಸುಖ ಶಾಂತಿ ನೆಮ್ಮದಿಯನ್ನು ಭಗವಂತ ಕರುಣಿಸಲಿ’ ಎಂದು ಪ್ರಾರ್ಥಿಸಿದರು.

ರೋಟರಿ ಮಹಮದ್‌ ನಖಿ, ಗುರುಶಂಕರ್‌, ಆಶ್ರದ ಮೇಲ್ವಿಚಾರಕ ತಿಮ್ಮರಾಜು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)