ಬುಧವಾರ, ಫೆಬ್ರವರಿ 26, 2020
19 °C

ರಿಲಯನ್ಸ್ ಚಿನ್ನಾಭರಣ ಪ್ರದರ್ಶನಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಗರದ ಅಥಣಿ ರಸ್ತೆಯ ಲೀಗ್ರೈಂಡಿ ಹೋಟೆಲ್‌ನಲ್ಲಿ ಶುಕ್ರವಾರ ಆರಂಭವಾದ ರಿಲಯನ್ಸ್ ಚಿನ್ನಾಭರಣ ಪ್ರದರ್ಶನ ಮತ್ತು ಮಾರಾಟಕ್ಕೆ ಶಾಸಕ ಸುನಿಲ್‌ಗೌಡ ಪಾಟೀಲ ಚಾಲನೆ ನೀಡಿ, ಆಭರಣಗಳನ್ನು ವೀಕ್ಷಿಸಿದರು.

ಬಳಿಕ ಮಾತನಾಡಿದ ಅವರು, ‘ಈ ಹಿಂದೆ ಮದುವೆ ಮತ್ತು ಶುಭ ಕಾರ್ಯಗಳಿಗೆ ಚಿನ್ನಾಭರಣ ಖರೀದಿಸಲು ದೂರದ ಹುಬ್ಬಳ್ಳಿ, ಬೆಳಗಾವಿಗೆ ತೆರಳಬೇಕಿತ್ತು. ಆದರೆ, ಈಗ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಗಳು ನಗರದಲ್ಲೇ ಆರಂಭವಾಗಿವೆ. ರಿಲಯನ್ಸ್‌ ಕೂಡ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಹಮ್ಮಿಕೊಂಡಿದ್ದು, ಇದರಿಂದ ಸ್ಥಳೀಯವಾಗಿಯೇ ಚಿನ್ನಾಭರಣ ಖರೀದಿಸಬಹುದಾಗಿದೆ’ ಎಂದು ಹೇಳಿದರು.

ರಿಲಯನ್ಸ್ ಜ್ಯುವೆಲ್ಸ್‌ನ ಶೋರೂಂ ವ್ಯವಸ್ಥಾಪಕ ಸಿ.ವೆಂಕಟೇಶ ಮಾತನಾಡಿ, ‘2017ರಿಂದ ರಿಲಯನ್ಸ್ ಜ್ಯುವೆಲ್ಸ್ ಮಳಿಗೆಗಳನ್ನು ಆರಂಭಿಸಲಾಗಿದ್ದು, ದೇಶದಾದ್ಯಂತ 200ಕ್ಕೂ ಅಧಿಕ ಮಳಿಗೆಗಳಿವೆ. ಮುಂಬರುವ ದಿನಗಳಲ್ಲಿ ವಿಜಯಪುರ ನಗರದಲ್ಲೂ ಮಳಿಗೆ ಆರಂಭಿಸುವ ಯೋಜನೆ ಇದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು