ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಜನ್ಮಭೂಮಿ ತೀರ್ಪು: ಸಾಹಾರ್ದ ಮೆರೆದ ಜಿಲ್ಲೆಯ ಜನರು

ಎಲ್ಲೆಡೆ ನಿಷೇಧಾಜ್ಞೆ ಜಾರಿ, ಸೂಕ್ಷ್ಮ ಪ್ರದೇಶಗಳ ಮೇಲೆ ಪೊಲೀಸ್‌ ಕಣ್ಗಾವಲು
Last Updated 9 ನವೆಂಬರ್ 2019, 17:30 IST
ಅಕ್ಷರ ಗಾತ್ರ

ಶಿವಮೊಗ್ಗ:ಅಯೋಧ್ಯೆ ರಾಮ ಜನ್ಮಭೂಮಿ ವಿವಾದ ಕುರಿತು ಸುಪ್ರೀಂಕೋರ್ಟ್‌ ಪ್ರಕಟಿಸಿದ ತೀರ್ಪುನ್ನು ಹಿಂದೂ–ಮುಸ್ಲಿಂ ಸಮುದಾಯದ ಮುಖಂಡರು ಸ್ವಾಗತಿಸಿದ್ದಾರೆ. ಜಿಲ್ಲೆಯ ಎಲ್ಲೆಡೆ ಪರಿಸ್ಥಿತಿ ಶಾಂತಿಯುತವಾಗಿತ್ತು.

ಅಯೋಧ್ಯೆ ರಾಮ ಜನ್ಮಭೂಮಿ ವಿವಾದದ ತೀರ್ಪು ಹೊರಬೀಳುತ್ತಿದ್ದಂತೆಜಿಲ್ಲೆಯ ಎಲ್ಲೆಡೆ ನಿಚೇಧಾಜ್ಞೆ ( ಸೆಕ್ಷನ್ 144) ಜಾರಿಗೊಳಿಸಲಾಗಿದೆ.ನ.10ರ ಬೆಳಿಗ್ಗೆ 10ರವರೆಗೂನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ವಿಜಯೋತ್ಸವ,ಮೆರವಣಿಗೆ, ಸಭೆ ಸಮಾರಂಭ, ಸಾರ್ವಜನಿಕ ಸಮಾವೇಶಗಳ ಮೇಲೆ ನಿರ್ಬಂಧ ಹೇರಲಾಗಿದೆ.

ಬಿಗಿ ತಪಾಸಣೆ:ಜಿಲ್ಲೆ ಪ್ರವೇಶಿಸುವ ಎಲ್ಲ ರಸ್ತೆಗಳಲ್ಲೂ ಚೆಕ್‌ಪೋಸ್ಟ್ ತೆರೆಯಲಾಗಿದೆ. ಜಿಲ್ಲೆ ಪ್ರವೇಶಿಸುವ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಆಯಕಟ್ಟಿನ ಸ್ಥಳಗಳಲ್ಲಿ, ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿಬಂಧೋಬಸ್ತ್‌ಕೈಗೊಳ್ಳಲಾಗಿದೆ. ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.

ವಿನಾಶಕಾರಿ ವಸ್ತುಗಳು, ಸ್ಫೋಟಕ ವಸ್ತುಗಳು,ಮಾರಕಾಸ್ತ್ರಗಳನ್ನುತೆಗೆದುಕೊಂಡು ಹೋಗುವುದು,ಶೇಖರಿಸುವುದು ನಿಷೇಧಿಸಲಾಗಿದೆ. ಪಟಾಕಿ ಸಿಡಿಸುವುದು, ಪ್ರತಿಕೃತಿ ದಹನ ಮಾಡುವುದು, ಪ್ರಚೋದನಾಘೋಷಣೆ, ಭಾಷಣಗಳನ್ನುನಿಷೇಧಿಸಲಾಗಿದೆ.

ಶಿವಮೊಗ್ಗ: ಶನಿವಾರ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಎರಡನೇ ಶನಿವಾರ ರಜೆ ಇದ್ದ ಕಾರಣ ಸಹಜವಾಗಿ ಸರ್ಕಾರಿ ಕಚೇರಿಗಳು ತೆರೆದಿರಲಿಲ್ಲ. ತೀರ್ಪು ಪ್ರಕಟವಾಗುವ ಮೊದಲೇ ಬಹುತೇಕ ರಸ್ತೆಗಳಲ್ಲಿ ಜನ ಸಂದಣಿ ಕಾಣಲಿಲ್ಲ. ಜನರು, ವಾಹನಗಳ ಸಂಚಾರ ವಿರಳವಾಗಿತ್ತು.

ಕುವೆಂಪು ವಿಶ್ವವಿದ್ಯಾಲಯದ ಪದವಿ ಪರೀಕ್ಷೆ ಮುಂದೂಡಲಾಗಿತ್ತು. ಮೌಲ್ಯಮಾಪನಕಾರ್ಯಗಳನ್ನೂಸ್ಥಗಿತಗೊಳಿಸಲಾಗಿತ್ತು.

ಹೇಳಿಕೆಗಳು

ಸುಪ್ರೀಂಕೋರ್ಟ್ ಏನು ತೀರ್ಪು ನೀಡಿದೆ ಎನ್ನುವುದು ಮುಖ್ಯವಲ್ಲ. ಕೊನೆಗೂ ಹಲವು ದಶಕಗಳ ವಿವಾದಕ್ಕೆ ತೆರೆ ಎಳೆಯಿತಲ್ಲ ಎನ್ನುವುದೇ ಸಮಾಧಾನದ ಸಂಗತಿ. ಇದೇ ವಿಷಯ ಇಟ್ಟುಕೊಂಡು ಕೆಲವು ಪಕ್ಷಗಳು ಸಾಕಷ್ಟು ರಾಜಕೀಯ ಲಾಭ ಪಡೆದಿವೆ. ಇನ್ನಾದರೂ ಈ ವಿಷಯ ತೆರೆಮರೆಗೆ ಸರಿಯುತ್ತದೆ.

–ಇಸ್ಮಾಯಿಲ್‌ ಖಾನ್, ಮಾಜಿ ಅಧ್ಯಕ್ಷ, ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ

ಸಮಾಜ ಒಟ್ಟಾಗಿರಬೇಕು

ಬಹು ದಿನಗಳ ನಿರೀಕ್ಷೆ ಈಡೇರಿದೆ. ಇದು ಪಕ್ಷಾತೀತಪ್ರಯತ್ನದ ಫಲ.ಇಂತಹ ಒಂದು ಕ್ಷಣಕ್ಕಾಗಿ ದಶಕಗಳ ಕಾಲ ಹೋರಾಡಿದ, ಮಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲಾಗುವುದು. ಇಂತಹ ಸಮಯದಲ್ಲಿ ಸಮಾಜ ಒಟ್ಟಾಗಿ ಸಾಗಬೇಕು. ಶಾಂತಿ ನೆಲೆಸಬೇಕು.

–ಎಂ.ಬಿ.ಭಾನುಪ್ರಕಾಶ್, ಉಪಾಧ್ಯಕ್ಷರು, ಬಿಜೆಪಿ ರಾಜ್ಯ ಘಟಕ

ಶಾಂತಿ ಎಲ್ಲಕ್ಕಿಂತ ಮಿಗಿಲು

ತೀರ್ಪು ಸ್ವಾಗತಾರ್ಹ. ದೇಶದ ಅತ್ಯುನ್ನರ ನ್ಯಾಯಾಲಯ ನೀಡಿದ ಆದೇಶ ಗೌರವಿಸುವುದು ಎಲ್ಲರ ಕರ್ತವ್ಯ. ಸಮಾಜದ ಸಾಮರಸ್ಯ, ಶಾಂತಿಯುತಜೀವನ ಎಲ್ಲಕ್ಕಿಂತ ಮಿಗಿಲು.

–ಆರ್.ಎಂ.ಮಂಜುನಾಥ ಗೌಡ, ಅಧ್ಯಕ್ಷರು, ಡಿಸಿಸಿ ಬ್ಯಾಂಕ್, ಶಿವಮೊಗ್ಗ

ಸುಪ್ರೀಂ ಆದೇಶಕ್ಕೆ ತಲೆಬಾಗಬೇಕು

ಸುಪ್ರೀಂ ಕೋರ್ಟ್‌ ಆದೇಶ ತೃಪ್ತಿ ತಂದಿಲ್ಲ. ಆದರೂ,ಸುಪ್ರೀಂ ಆದೇಶಕ್ಕೆ ತಲೆಬಾಗಲೇಬೇಕು.ರಾಜಕೀಯಹಿತಾಸಕ್ತಿಗೆ ಅವಕಾಶ ಇರಬಾರದು.ಈ ವಿಷಯದಲ್ಲಿ ಸುಪ್ರೀಂ ನಿರ್ಧಾರವೇ ಅಂತಿಮ.
-ನಿಹಾಲ್,ಅಧ್ಯಕ್ಷ, ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕ

ತೀರ್ಪಿಗಿಂತ ನೆಮ್ಮದಿ ಮುಖ್ಯ

ಸುಪ್ರೀಂ ಕೋರ್ಟ್ ತೀರ್ಪು ಮುಖ್ಯವಲ್ಲ. ಈದ್ ಆಚರಣೆಯ ಈ ಸಮಯದಲ್ಲಿ ಇಂತಹ ವಿಷಯಗಳನ್ನು ನೆಪವಾಗಿಟ್ಟುಕೊಂಡು ಯಾರೂ ಗಲಭೆಗಳಿಗೆ ಅವಕಾಶ ನೀಡಬಾರದು. ಶಾಂತಿಗೆ ಮೊದಲ ಆದ್ಯತೆ ಇರಬೇಕು.

–ಮುಸ್ತಿ ಆಶೀಂ ಮಿಸ್ಬಾಯಿ, ಖಾಜಿ, ಜಾಮೀಯಾ ಮಸೀದಿ

ಸತ್ಯಕ್ಕೆ ಸಂದ ಜಯ

ಸತ್ಯಕ್ಕೆ ಸಂದ ಜಯ. ಸುದೀರ್ಘ ಕಾಲದ ನಂತರ ಒಳ್ಳೆಯ ತೀರ್ಪು ಹೊರಬಿದ್ದಿದೆ. ಬೇರೆಯವರು ಇದು ಸೋಲು ಎಂದು ಭಾವಿಸಬಾರದು. ಪರಸ್ಪರ ಭಾವನೆಗಳನ್ನು ಎಲ್ಲರೂ ಗೌರವಿಸಬೇಕು.

–ರಮೇಶ್ ಬಾಬು, ಅಧ್ಯಕ್ಷರು, ವಿಶ್ವ ಹಿಂದೂ ಪರಿಷತ್

ಪ್ರತಿಕ್ರಿಯೆ ಸೌಹಾರ್ದದ ಪ್ರತೀಕ

ತೀರ್ಪು ಹೊರ ಬಂದಾಗ ದೇಶದ ಜನರು ಪ್ರತಿಕ್ರಿಯಿಸಿದ ರೀತಿ ಭವಿಷ್ಯದ ಸೌಹಾರ್ದ ಬದುಕಿಗೆ ಮಾದರಿ. ಜನರ ಸಂಯಮ ಮೆಚ್ಚಬೇಕು. ತೀರ್ಪು ಸ್ವಾಗತಾರ್ಹ. ಇದೇ ಸಾಹಾರ್ದ ವಾತಾವರಣ ಮುಂದಿನ ಪೀಳಿಗೆಗೂ ಮಾದರಿಯಾಗಲಿ.

–ಬಸವ ಮರುಳಸಿದ್ದ ಸ್ವಾಮೀಜಿ, ಬಸವ ಕೇಂದ್ರ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT