ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಉತ್ಪಾದಕರಿಗೆ ಮತ್ತೆ ಬಂಪರ್: ₹ 1.70 ಹೆಚ್ಚಳ

Last Updated 11 ಡಿಸೆಂಬರ್ 2019, 10:06 IST
ಅಕ್ಷರ ಗಾತ್ರ

ಶಿವಮೊಗ್ಗ: ಶಿವಮೊಗ್ಗ, ದಾವಣಗೆರೆ,ಚಿತ್ರದುರ್ಗ ಹಾಲು ಉತ್ಪಾದಕರ ಒಕ್ಕೂಟ (ಶಿದಾಚಿಮುಲ್‌) ಹಾಲು ಉತ್ಪಾದಕರಿಗೆ ನೀಡುವ ಖರೀದಿ ದರವನ್ನು ಡಿ.11ರಿಂದ ಅನ್ವಯವಾಗುವಂತೆ ಮತ್ತೆ ₹ 1.70 ಹೆಚ್ಚಳ ಮಾಡಿದೆ.

ಒಕ್ಕೂಟಆರು ತಿಂಗಳ ಅವಧಿಯಲ್ಲಿಹಾಲುಉತ್ಪಾದಕರಿಗೆ ನೀಡುವ ದರವನ್ನುಮೂರು ಬಾರಿ ಹೆಚ್ಚಳ ಮಾಡಿದೆ.ಲಾಭಾಂಶದ ಪ್ರಮಾಣ ಸತತ ಹೆಚ್ಚಳ ಕಾಣುತ್ತಿದ್ದು, ಹೆಚ್ಚುವರಿ ಲಾಭವನ್ನು ರೈತರಿಗೆ ವರ್ಗಾಯಿಸಲಾಗುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ಆನಂದ್ ಮಾಹಿತಿ ನೀಡಿದರು.

ಪ್ರಸ್ತುತ ಪ್ರತಿ ಲೀಟರ್‌ ಹಾಲಿಗೆ ₹ 27 ನೀಡಲಾಗುತ್ತಿದೆ. ದರ ಹೆಚ್ಚಳದ ನಂತರ 28.70 ಸಿಗಲಿದೆ. ಸರ್ಕಾರ ಪ್ರತಿ ಲೀಟರ್‌ಗೆ ₹6 ಸಹಾಯಧನ ನೀಡುತ್ತಿದೆ. ಆ ಪ್ರೋತ್ಸಾಹಧನವೂಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ಕನಿಷ್ಠ ₹ 34.70 ದೊರೆಯಲಿದೆ.

ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ 1,120 ಸಹಕಾರ ಹಾಲು ಒಕ್ಕೂಟಗಳಿವೆ. ಪ್ರತಿದಿನ 5 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತದೆ. ಗ್ರಾಹಕರು ಖರೀದಿಸುವ ಹಾಲಿನ ದರದಲ್ಲಿ ಯಾವುದೇ ಏರಿಕೆಇರುವುದಿಲ್ಲ ಎಂದು ಒಕ್ಕೂಟ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT