ಶುಕ್ರವಾರ, ಫೆಬ್ರವರಿ 21, 2020
18 °C

ಸೂರಗೊಂಡನಕೊಪ್ಪ: 0ಸಂತ ಸೇವಾಲಾಲ್‌ ಜಯಂತಿಗೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕು ಸೂರಗೊಂಡನಕೊಪ್ಪದಲ್ಲಿ ಫೆ.13, 14 ಮತ್ತು 15ರವರೆಗೆ ಸಂತ ಸೇವಾಲಾಲ್‌ ಅವರ 281ನೇ ಜಯಂತಿ ಹಮ್ಮಿಕೊಳ್ಳಲಾಗಿದೆ.

ಫೆ.13ರ ಬೆಳಿಗ್ಗೆ 8ಕ್ಕೆ ಲಮಾಣಿ ಸಮಿತಿಯ ಅಧ್ಯಕ್ಷ ಎಂ.ರುದ್ರಪ್ಪ ಧ್ವಜಾರೋಹಣ, ಮಾತಾ ಮರಿಯಮ್ಮ ದೇವಿಯಮ್ಮ ಕಾಟಿ ಆರೋಹಣವನ್ನು ಪಿ.ರಾಜೀವ್ ಹಾಗೂ ಧಾರ್ಮಿಕ ವಿಧಿ-ವಿಧಾನಗಳ ಆರಂಭೋತ್ಸವವನ್ನು ತಾಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ ನಾಯ್ಕ ನೆರವೇರಿಸುವರು. ಮಧ್ಯಾಹ್ನ 12ಕ್ಕೆ ವಾಲಿಬಾಲ್ ಕ್ರೀಡೆಗಳು ನಡೆಯಲಿವೆ ಎಂದು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಫೆ.14ರ ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಮಧ್ಯಾಹ್ನ 2.30ಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಯಂತ್ಯುತ್ಸವ ಉದ್ಘಾಟಿಸುವರು. ಉಪ ಮುಖ್ಯಮಂತ್ರಿಗಳಾದ ಗೋವಿಂದ ಎಂ.ಕಾರಜೋಳ, ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಲಕ್ಷ್ಮಣ್ ಎಸ್.ಸವದಿ, ಸಚಿವರಾದ ಕೆ.ಎಸ್.ಈಶ್ವರಪ್ಪ, ಪ್ರಭು ಬಿ.ಚವ್ಹಾಣ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕರಾದ ಜಿ.ಎಂ.ಸಿದ್ದೇಶ್ವರ್, ಶ್ಯಾಮನೂರು ಶಿವಶಂಕರಪ್ಪ ಉಪಸ್ಥಿತರಿರುವರು. ಶಾಸಕ ಎಂ.ಪಿ. ರೇಣುಕಾಚಾರ್ಯ ಅಧ್ಯಕ್ಷತೆ ವಹಿಸುವರು ವಿವರ ನೀಡಿದರು.

ಅಂದು ಸಂಜೆ 6.30ಕ್ಕೆ ಸಮಾಜದ ಮುಖಂಡರು, ಸಾಧು ಸಂತರು ಮತ್ತು ಜನಪ್ರತಿನಿಧಿಗಳ ಚಿಂತನಾಸಭೆ, ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.15ರ ಬೆಳಿಗ್ಗೆ 9ಕ್ಕೆ‘ಮಹಾಭೋಗ್’ ಮಹಾಪ್ರಸಾದ ವಿನಿಯೋಗದೊಂದಿಗೆ ಜಾತ್ರಾ ಮುಹೋತ್ಸವ ಸಂಪನ್ನಗೊಳ್ಳಲಿದೆ ಎಂದರು.

ಈ ಸಾಂಸ್ಕೃತಿಕ ಜಾತ್ರಾ ಮುಹೋತ್ಸವದಲ್ಲಿ ಬಂಜಾರರ ಕಲೆ ಮತ್ತು ಧಾರ್ಮಿಕ ಪರಂಪರೆ 10 ವೇದಿಕೆಗಳಲ್ಲಿ ಅನಾವರಣವಾಗಲಿದೆ. ದೇಶದ ನಾನಾ ಭಾಗಗಳಿಂದ ಬರುವ ಭಕ್ತರು, ಮಾಲಾಧಾರಿಗಳು, ಕಲಾತಂಡಗಳು, ರಂಗುರಂಗಿನ ಉಡುಗೆ ತೊಟ್ಟು ಕಂಗೊಳಿಸುವರು. ಈ ಮಹಾ ಉತ್ಸವದಲ್ಲಿ ಅನೇಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ‘ಲದೇಣಿ ಬಂಜಾರ’ ತಂಡ ಕರವಸೂಲಿ ಮಾಡುತ್ತಿದ್ದ ಬ್ರಿಟಿಷರ ವಿರುದ್ಧ ಸಿಡಿದಿತ್ತು. 18ನೇ ಶತಮಾನದಲ್ಲಿಯೇ ಕರ ನಿರಾಕರಣೆ ಚಳವಳಿಯ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸಂತ ಸೇವಾಲಾಲರು ಒಬ್ಬ ಮಹಾನ್ ಯೋಗಿ, ಮಹಾಜ್ಞಾನಿ. ಅಲೆಮಾರಿ ಬಂಜಾರ ಸಮುದಾಯಕ್ಕೆ ಶಾಶ್ವತ ಬದುಕು ಕಟ್ಟಿಕೊಟ್ಟ ಸಮಾಜ ಸುಧಾರಕ. ಇಂತಹ ಮಹಾಮಹಿಮ ತತ್ವಜ್ಞಾನಿಯ 280ನೇ ಜಯಂತಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುವುದು ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ರಾಘವೇಂದ್ರ ನಾಯ್ಕ, ತ್ಯಾವರೇ ನಾಯ್ಕ, ಕುಮಾರ್ ನಾಯ್ಕ, ನಾನ್ಯಾನಾಯ್ಕ, ನಾಗೇಶ್  ನಾಯ್ಕ, ಶಶಿಕುಮಾರ್, ಮಾರುತಿ, ಮನೋಹರ್, ಗಿರೀಶ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು