ತೀರ್ಥಹಳ್ಳಿ ಪಟ್ಟಣದಲ್ಲಿ ಭಾನುವಾರ ನಡೆದ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲೂ ವಿಪರೀತ ಪ್ರಮಾಣದ ಧ್ವನಿವರ್ಧಕ ಮತ್ತು ಲೇಸರ್ ಬಳಕೆ ಮಾಡಲಾಗಿದೆ. ಪರಿಣಾಮವಾಗಿ ಡ್ರೋಣ್, ಡಿಎಸ್‌ಎಲ್‌ಆರ್ ಕ್ಯಾಮೆರಾ, 150ಕ್ಕೂ ಹೆಚ್ಚು ಮೊಬೈಲ್ ಕ್ಯಾಮೆರಾ ಲೆನ್ಸ್, ಡಿಸ್ಪ್ಲೇ, ಆಜಾದ್ ರಸ್ತೆಯ ಡಿವೈಡರ್ ಮೇಲಿನ ಮರದಲ್ಲಿ ವಾಸವಾಗಿದ್ದ ಗುಬ್ಬಚ್ಚಿ, ಸಣ್ಣ ಪಕ್ಷಿಗಳು ಹೃದಯಾಘಾತದಿಂದ ಮೃತಪಟ್ಟಿವೆ. ಕೆಲವು ಪಕ್ಷಿಗಳು ಹಾರಿ ಹೋಗಿವೆ. ಕೆಲ ಅಂಗಡಿಗಳಲ್ಲಿ ವಸ್ತುಗಳು ಅಲ್ಲಾಡಿವೆ ಎಂದು ಪ್ರತ್ಯಕ್ಷದರ್ಶಿ ಸಂದೇಶ ಜವಳಿ ತಿಳಿಸಿದರು.