ಭಾನುವಾರ, ಅಕ್ಟೋಬರ್ 24, 2021
20 °C
ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ ನಾಯ್ಕ

ಕಾರ್ಯಕರ್ತರೇ ಬಿಜೆಪಿಗೆ ಆಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಳೆಹೊನ್ನೂರು: ನಿಷ್ಠಾವಂತ ಕಾರ್ಯಕರ್ತರಿಗೆ ಬಿಜೆಪಿ ಪಕ್ಷದಲ್ಲಿ ಉತ್ತಮ ಅವಕಾಶವಿದೆ. ಕಾರ್ಯಕರ್ತರೇ ಬಿಜೆಪಿಗೆ ಆಧಾರ ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ ನಾಯ್ಕ ತಿಳಿಸಿದರು.

ಪಟ್ಟಣ, ಕೊಪ್ಪ, ಜಂಬರಘಟ್ಟ, ಮೂಡಲ ವಿಠಲಾಪುರ, ಕೆರೆ ಬೀರನಹಳ್ಳಿ, ಎಮ್ಮೆಹಟ್ಟಿ, ಅಗಸನಹಳ್ಳಿ, ದಾಸರಕಲ್ಲಹಳ್ಳಿ, ಅರದೊಟ್ಲು, ಅರಬಿಳಚಿ, ವಡ್ಡರಹಟ್ಟಿ, ಅರಬಿಳಚಿ ಕ್ಯಾಂಪ್, ಕಲ್ಲಾಪುರ, ಅರಕೆರೆ ಹಾಗೂ ದಾನವಾಡಿ ಗ್ರಾಮಗಳಲ್ಲಿ ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಸಿ ಮಾತನಾಡಿದರು.

‘ಪಕ್ಷವು ಪ್ರತಿಯೊಬ್ಬ ಕಾರ್ಯಕರ್ತರನ್ನು ಗುರುತಿಸಿ ಉತ್ತಮ ಸ್ಥಾನಮಾನ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ಹಲವಾರು ಬಾರಿ ಇದನ್ನು ನಿರೂಪಿಸಿದೆ. ಕಾರ್ಯಕರ್ತರು ಪಕ್ಷದ ಬೆನ್ನೆಲುಬು. ಅವರಿಂದಲೇ ಇಂದು ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದೆ. ಇನ್ನೂ ಮುಂದೆಯೂ ಇದೇ ಸಹಕಾರ ನೀಡಿದರೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಸಮಗ್ರ ಅಭಿವೃದ್ಧಿ ಹೊಂದುವುದರಲ್ಲಿ ಎರಡು ಮಾತಿಲ್ಲ’ ಎಂದು ಹೇಳಿದರು.

ಕಾರ್ಯಕರ್ತರು ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸುವವರನ್ನು ಗೆಲ್ಲಿಸುವ ಮೂಲಕ ಈ ಭಾಗದಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸಬೇಕು ಎಂದು ಸಲಹೆ ನೀಡಿದರು.

ಹೊಳೆಹೊನ್ನೂರು ಮಂಡಲದ ಅಧ್ಯಕ್ಷ ಕಲ್ಲಜ್ಜನಾಳ್ ಮಂಜುನಾಥ್, ಉಪಾಧ್ಯಕ್ಷ ಸುಬ್ರಮಣಿ, ರಾಜೇಶ್ ಪಟೇಲ್, ಫಾಲಾಕ್ಷಪ್ಪ, ಕಿರಣ್, ಉಜ್ಜಿನಪ್ಪ, ರಾಮಚಂದ್ರರಾವ್ ಕದಂ, ಸಿದ್ದಪ್ಪ, ಮಲ್ಲೇಶಪ್ಪ ಮಲ್ಲಾಪುರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು