ಶಿವಮೊಗ್ಗ: ಬನ್ನೇರುಘಟ್ಟದಿಂದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಎರಡು ಸಿಂಹಗಳ ಆಗಮನವಾಗಿದೆ.ಪ್ರಸ್ತುತ ನಾಲ್ಕು ಸಿಂಹಗಳಿದ್ದವು. ಹೊಸ ಸಿಂಹಗಳ ಸೇರ್ಪಡೆಯಿಂದ ಧಾಮದ ಸಿಂಹಗಳ ಸಂಖ್ಯೆ 6ಕ್ಕೇರಿದೆ.
ಏಳು ವರ್ಷಗಳ ಸುಚಿತ್ರಾ, ಯಶವಂತ ಜೋಡಿ ಆಗಮನದಿಂದ ಸಂತಾನಾಭಿವೃದ್ಧಿಯ ನಿರೀಕ್ಷೆ ಮೂಡಿದೆ. 13 ವರ್ಷಗಳಿಂದ ಧಾಮದಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆ ನಡೆದಿಲ್ಲ. ಚಾಮುಂಡಿ ಹುಲಿಗೆ ಜನಿಸಿದ್ದ ವಿಜಯದಶಮಿ ಹುಲಿಯೇ ಕೊನೆಯ ಮರಿ.
‘ಬನ್ನೇರುಘಟ್ಟದಿಂದ ಎರಡು ಸಿಂಹಗಳನ್ನು ತರಲಾಗಿದೆ. ಅವುಗಳ ಹೊಂದಾಣಿಕೆಗೆ ಮೊದಲ ಆದ್ಯತೆ ನೀಡಲಾಗುವುದು. ನಂತರ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು’ ಎಂದು ಧಾಮದ ಡಿಸಿಎಫ್ ಮುಕುಂದ್ ಚಂದ್’ ಮಾಹಿತಿ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.