ಗುರುವಾರ , ಡಿಸೆಂಬರ್ 1, 2022
20 °C

ಸರ್ವ ಧರ್ಮ ಸಹಿಷ್ಣುತೆ ಪಾಲಿಸಿದ್ದು ಕೆಳದಿ ಅರಸರ ಹೆಗ್ಗಳಿಕೆ: ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ಸರ್ವ ಧರ್ಮ ಸಹಿಷ್ಣುತೆಯನ್ನು ಪಾಲಿಸಿದ್ದು ಕೆಳದಿ ಸಂಸ್ಥಾನವನ್ನು ಆಳಿದ ಅರಸರ ಹೆಗ್ಗಳಿಕೆಯಾಗಿದೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ ಎಂದು ಆನಂದಪುರಂನ ಮುರುಘಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕೆಳದಿ ರಾಜಗುರು ಹಿರೇಮಠದಲ್ಲಿ ದಸರಾ ಉತ್ಸವದ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಪಚ್ಚೆಲಿಂಗ ದರ್ಶನ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಕೆಳದಿ ರಾಜಗುರು ಹಿರೇಮಠವು ಪಚ್ಚೆಲಿಂಗದಂತಹ ಐತಿಹಾಸಿಕ ಮಹತ್ವ ಹೊಂದಿರುವ ಅಪರೂಪದ ವಸ್ತು ಹಾಗೂ ಸಂಗತಿಗಳನ್ನು ತನ್ನ ಒಡಲಿನಲ್ಲಿ ಇರಿಸಿಕೊಂಡಿದೆ. ಆದರೆ ಎಲ್ಲದಕ್ಕಿಂತ ಭಕ್ತರೇ ಮಠದ ಪ್ರಮುಖ ಆಸ್ತಿಯಾಗಿದ್ದಾರೆ ಎಂದು ಅವರು ಹೇಳಿದರು.

‘ನಮ್ಮ ನೆಲದ ಆಚಾರ, ವಿಚಾರ, ಸಂಸ್ಕೃತಿಯನ್ನು ಕಾಪಾಡುವ
ಕೆಲಸವನ್ನು ಮಠಗಳು ನಿರಂತರವಾಗಿ ಮಾಡುತ್ತಿದ್ದು ಆ ಮೂಲಕ ಜನರಲ್ಲಿ ಸಂಸ್ಕಾರವನ್ನು ಬಿತ್ತುತ್ತಿವೆ. ಮಠಗಳ ಬೆಳವಣಿಗೆ ಎಂದರೆ ಅದು ಸಮಾಜದ ಬೆಳವಣಿಗೆ ಎಂಬ ಭಾವನೆ ಬೇಕಾಗಿದೆ’ ಎಂದು ಕೆಳದಿ ರಾಜಗುರು
ಹಿರೇಮಠದ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ
ಹೇಳಿದರು.

ದಸರಾ ಉತ್ಸವ ಸಮಿತಿ ಅಧ್ಯಕ್ಷ ಎಂ.ಎಸ್.ಗೌಡರ್ ಅಧ್ಯಕ್ಷತೆ ವಹಿಸಿದ್ದರು. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಅಭಿನವ ಚೆನ್ನಬಸವ ಸ್ವಾಮೀಜಿ, ಶಿವಸಿದ್ದರಾಮೇಶ್ವರ ಸ್ವಾಮೀಜಿ, ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ರಾಜೇಂದ್ರ ಆವಿನಹಳ್ಳಿ, ಗುರು ಕಾಗೋಡು, ಲೋಕನಾಥ್ ಬಿಳಿಸಿರಿ, ದಿನೇಶ್ ತಟ್ಟೆಕೊಪ್ಪ, ದೇವರಾಜ್ ಕೆರೋಡಿ, ಗಿರೀಶ್ ಗೌಡ, ಕುಮಾರ ಗೌಡ ಕೊಪ್ಪ
ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು