ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನ ಸರ್ವಾಧ್ಯಕ್ಷರಿಗೆ ಆಹ್ವಾನ

Last Updated 8 ಫೆಬ್ರುವರಿ 2021, 2:22 IST
ಅಕ್ಷರ ಗಾತ್ರ

ಸೊರಬ: ಸಮಾಜದಲ್ಲಿ ಬದುಕು ನಡೆಸಲು ವಿವಿಧ ವೃತ್ತಿ ಅವಲಂಬಿಸುವುದು ಸಹಜ. ಕನ್ನಡ ನಾಡು, ನುಡಿಯ ಬಗ್ಗೆ ಬಾಲ್ಯದಿಂದಲೂ ಅಭಿಮಾನ ಹೊಂದಿದ್ದು, ವೃತ್ತಿ ಜೊತೆಗೆ ಕಲೆ, ಸಾಹಿತ್ಯ ಅಭಿರುಚಿ ಬೆಳೆಸಿಕೊಂಡ ನನಗೆ ತಾಲ್ಲೂಕು 8ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದು ಡಾ. ಎಂ.ಕೆ.ಭಟ್ ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ತಾಲ್ಲೂಕಿನ ಜಡೆ ಗ್ರಾಮದಲ್ಲಿ ಫೆ.10ರಂದು ನಡೆಯುವ 8ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಾನುವಾರ ಅಧಿಕೃತ ಆಹ್ವಾನ ಸ್ವೀಕರಿಸಿ ಅವರು ಮಾತನಾಡಿದರು.

‘ಪ್ರತಿಯೊಬ್ಬರೂ ತಮ್ಮ ಜೀವಿತದ ಅವಧಿಯಲ್ಲಿ ವ್ಯೆಯಕ್ತಿಕ ಜವಾಬ್ದಾರಿ ಜೊತೆಗೆ ಸಮಾಜಕ್ಕಾಗಿ ಏನು ಕೊಡುಗೆ ನೀಡಿದ್ದೇನೆ ಎನ್ನುವ ಬಗ್ಗೆ ಪ್ರಶ್ನಿಸಿಕೊಳ್ಳಬೇಕು. ಸ್ವಾರ್ಥ ಮನೋಭಾವದಿಂದ ಹೊರಬಂದು ಕಿಂಚಿತ್ತಾದರೂ ಸಮಾಜಕ್ಕಾಗಿ ಕೈಲಾದ ಸೇವೆ ಮಾಡುವ ಮನಃಸ್ಥಿತಿ ಹೊಂದಬೇಕು. ನಾಡು, ನುಡಿ, ಕಲೆ, ಸಾಹಿತ್ಯದ ವಿಚಾರಗಳು ಬಂದಾಗ ಎಲ್ಲರೂ ಒಗ್ಗಟ್ಟಾಗಿ ಹೋರಾಡಲು ಶ್ರಮಿಸೋಣ’ ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಧುರಾಯ್ ಶೇಟ್, ಆನವಟ್ಟಿ ಘಟಕದ ಅಧ್ಯಕ್ಷ ಮೃತ್ಯುಂಜಯಗೌಡ, ಉಳವಿ ಘಟಕದ ಅಧ್ಯಕ್ಷ ಶಿವಕುಮಾರ್, ಸವಿತಾ ಭಟ್, ವಿಜಯೇಂದ್ರಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಶಿವಲಿಂಗಗೌಡ, ಎಚ್.ಎಸ್.ಮಂಜಪ್ಪ. ಡಾ. ಜ್ಞಾನೇಶ್ ಪಾಣಿ ರಾಜಪ್ಪ, ಹಾಲೇಶ್ ನವುಲೆ, ಕೃಷ್ಣಾನಂದ, ಮಂಜಪ್ಪ, ಪಾಣಿ ಶಿವಾನಂದಪ್ಪ, ಲಲಿತಾ, ಜಯಮಾಲಾ, ರೇಣುಕಮ್ಮಗೌಳಿ, ಅನ್ಸರ್, ಹುಣವಳ್ಳಿ ಪ್ರಶಾಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT