ಶಿವಮೊಗ್ಗ: ಶರಾವತಿ ನಗರದಲ್ಲಿ ಸ್ಮಾರ್ಟ್ಸಿಟಿ ಕಾಮಗಾರಿ ವೈಜ್ಞಾನಿಕವಾಗಿದೆಎಂದುಅಣ್ಣಾ ಹಜಾರೆ ಹೋರಾಟ ಸಮಿತಿಅಧ್ಯಕ್ಷ ಅಶೋಕ್ ಯಾದವ್ ಆರೋಪಿಸಿದರು.

ಶರಾವತಿ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಕಾಮಗಾರಿಗಳು ಕಳಪೆಯಾವೆ. ರಸ್ತೆ ಅಗೆದು ಯುಜಿಡಿ ಅಳವಡಿಸುವಾಗ ಯಾವುದೇ ನಿಯಮ ಪಾಲಿಸಿಲ್ಲ. 3 ಮೀಟರ್ ಆಳದಲ್ಲಿ ಕೇಬಲ್ ಅಳವಡಿಸಬೇಕಿತ್ತು. ಆದರೆ, ಕೇವಲ1 ಅಡಿ ಆಳದಲ್ಲಿ ಕೇಬಲ್ ಅಳವಡಿಸಲಾಗುತ್ತಿದೆ.ದಿನದ 24ಗಂಟೆಗಳೂ ನೀರಿನ ಸಂಪರ್ಕಕಲ್ಪಿಸುವ ಪೈಪ್ಗಳನ್ನೂ 1ಮೀಟರ್ ಆಳದಲ್ಲಿ ಅಳವಡಿಸಬೇಕಿತ್ತು. 1 ಅಡಿ ಆಳದಲ್ಲಿ ಅಳವಡಿಸಲಾಗಿದೆ. ಇದು ಭವಿಷ್ಯದಲ್ಲಿ ಅನಾಹುತಕ್ಕೆ ದಾರಿಮಾಡಿಕೊಡುತ್ತದೆ ಎಂದುದೂರಿದರು.

ನಿಗಾ ವಹಿಸದೇ ಅಧಿಕಾರಿಗಳುನಿರ್ಲಕ್ಷ್ಯ ಮಾಡುತ್ತಿದ್ದಾರೆ. ಕಾಮಗಾರಿಗಳತ್ತ ಗಮನಹರಿಸಬೇಕು. ನಗರದ ಎಲ್ಲಡೆ ಇಂತಹಅವೈಜ್ಞಾನಿಕ ಕಾಮಗಾರಿ ನಡೆಯುತ್ತಿವೆ.ಮೇಯರ್ ವಾರ್ಡ್ನಲ್ಲೇ ಕಳಪೆ ಕಾಮಗಾರಿ ನಡೆದರೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡಿಲ್ಲ. ಮೇಯರ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.