ಶಿವಮೊಗ್ಗ: ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಖರೀದಿಸಲು ಅನುಕೂಲವಾಗುವಂತೆ ಒಂದುಸಾವಿರ ಚಿಕ್ಕಅಪಾರ್ಟ್ಮೆಂಟ್ಗಳನ್ನು (ಸಿಂಗಲ್ ಬೆಡ್ ರೂಂ ಇರುವ) ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಹೇಳಿದರು.

ಶಿವಮೊಗ್ಗಪ್ರೆಸ್ಟ್ರಸ್ಟ್ ಮಂಗಳವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಲವು ಕುಟುಂಬಗಳುಸಣ್ಣಪುಟ್ಟ ವ್ಯವಹಾರ, ಉದ್ಯೋಗ ಮಾಡಿಕೊಂಡು ನಿಶ್ಚಿತ ಆದಾಯ ಗಳಿಸುತ್ತಾಜೀವನನಡೆಸುತ್ತಿದ್ದಾರೆ. ಇಂತಹಕುಟುಂಬಗಳನ್ನು ಗುರುತಿ, ಅವರ ಆರ್ಥಿಕ ಸ್ಥಿತಿಗೆ ಹೊಂದುವಂತೆ ಮನೆಗಳನ್ನುನಿರ್ಮಿಸಲಾಗುವುದು. ಈಗಾಗಲೇ ಸೋಮಿನಕೊಪ್ಪದಲ್ಲಿ 1.9 ಎಕರೆ ಜಾಗ ಗುರುತಿಸಲಾಗಿದೆ. ಇತರೆಭಾಗದಲ್ಲೂ ನಿವೇಶನ ಗುರುತಿಸಲಾಗುವುದು. ಉತ್ತಮಅಪಾರ್ಟ್ಮೆಂಟ್ನಿರ್ಮಿಸಲಾಗುವುದು ಎಂದರು.

ಕೆರೆಗಳಅಭಿವೃದ್ಧಿ ಆದ್ಯತೆ:ಹೊಸ ನಿವೇಶನ, ಪಾರ್ಕ್ಗಳಅಭಿವೃದ್ಧಿ, ಕೆರೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಕುವೆಂಪು ನಗರ, ನಿಧಿಗೆ ಕೆರೆ, ಆಲ್ಕೊಳದ ಕೆರೆ, ವಿಕಾಸ ಶಾಲೆ ಹಿಂಭಾಗದ ಕೆರೆ, ನವುಲೆ ಕೆರೆ, ಸೋಮಿನಕೊಪ್ಪ ಕೆರೆ ಸೇರಿದಂತೆ ಸುಮಾರು 12 ಕೆರೆಗಳನ್ನು ಅಭಿವೃದ್ಧಿಪಡಿಸಲಾಗುವುದು.ಕೆರೆ ಒತ್ತುವರಿ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

ಪ್ರತಿ ಉದ್ಯಾನದಲ್ಲೂ ಜಿಮ್:ಪಾರ್ಕ್ಗಳ ಅಭಿವೃದ್ಧಿಗೆಗಮನ ಹರಿಸಲಾಗುವುದು. ಸುಮಾರು 150ಕ್ಕೂ ಹೆಚ್ಚು ಉದ್ಯಾನಗಳಿವೆ. ನಾಗರಿಕರ ಆರೋಗ್ಯಕ್ಕೆ ಉದ್ಯಾನಗಳ ಅಗತ್ಯವಿದೆ. ಎಲ್ಲಉದ್ಯಾನಗಳಲ್ಲೂಓಪನ್ ಜಿಮ್ ಆರಂಭಿಸಲಾಗುವುದು ಎಂದರು.

ವಾಜಪೇಯಿ ಬಡಾವಣೆ ನಿವೇಶನಗಳವಿವಾದ ಲೋಕಾಯುಕ್ತದಲ್ಲಿದೆ. ಹಲವುಅರ್ಜಿದಾರರು ವಾಪಸ್ ತೆಗೆದುಕೊಂಡಿದ್ದಾರೆ.6,700 ಅರ್ಜಿಗಳು ಬಾಕಿ ಇವೆ. ನಿವೇಶನ ಪಡೆದವರು ಮನೆಕಟ್ಟಲು ಆಗದೇ ಸಂಕಷ್ಟದಲ್ಲಿದ್ದಾರೆ. ಅವರು ನಿವೇಶನ ಪಡೆದು10 ವರ್ಷಗಳಾಗಿವೆ. ಮನೆ ಕಟ್ಟುವ ಉತ್ಪಾದನಾ ವೆಚ್ಚ ಕೂಡ ಹೆಚ್ಚಾಗಿದೆ. ಇಲ್ಲಿನ ಸಮಸ್ಯೆ ಬೇಗನೆ ಬಗೆಹರಿಸಲಾಗುವುದು ಎಂದರು.

ರೈತರು ಈಗ ಭೂಮಿ ನೀಡಲು ಮುಂದೆ ಬರುತ್ತಿದ್ದಾರೆ. ಮೊದಲು 40:60ರ ಅನುಪಾತದಲ್ಲಿ ನಿವೇಶನಗಳನ್ನು ಖರೀದಿಸಲಾಗುತ್ತಿತ್ತು. ಆದರೆ, ಈಗ 50:50 ಅನುಪಾತಕ್ಕೆ ಸರ್ಕಾರ ಅನುಮತಿನೀಡಿದೆ. ಇದರಿಂದ ಹೆಚ್ಚು ಬಡಾವಣೆಗಳನ್ನು ನಿರ್ಮಿಸಲು ಸಾಧ್ಯವಾಗಲಿದೆ.ಈಗಾಗಲೇ ಸುಮಾರು16 ಕಡೆ ಜಮೀನುಗುರುತಿಸಲಾಗಿದೆ. ನಿವೇಶನ ರಹಿತರಿಗೆಅನುಕೂಲ ಮಾಡಲಾಗುವುದು ಎಂದು ವಿವರ ನೀಡಿದರು.

ಬಂಗಾರಪ್ಪ ಸ್ಮರಣೆ:ಲಾರಿ ಮಾಲೀಕರ ಸಂಘದ ಅಧ್ಯಕ್ಷರಾಗಿದ್ದಾಗ ಬಂಗಾರಪ್ಪಅವರು ಹಮ್ಮಿಕೊಂಡಿದ್ದ ಭತ್ತ ಹಂಚುವ ಕಾರ್ಯಕ್ರಮಕ್ಕೆ 100ಕ್ಕೂ ಹೆಚ್ಚು ಲಾರಿಗಳನ್ನು ಕಳಿಸಿಕೊಟ್ಟಿದ್ದೆ. ಆಗಲೂ ಬಿಜೆಪಿಯಲ್ಲೇ ಇದ್ದೆ. ಲಾರಿ ಮಾಲೀಕರ ಸಂಘದ ಅಧ್ಯಕ್ಷನಾಗಿ ಅವರಿಗೆ ಲಾರಿಗಳನ್ನು ಕಳುಹಿಸಿಕೊಟ್ಟೆ. ಬಂಗಾರಪ್ಪ ಎಲ್ಲಿ ಹೋದರೂ ತಮ್ಮನ್ನು ಅಭಿನಂದಿಸುತ್ತಿದ್ದರು ಎಂದುಸ್ಮರಿಸಿದರು.

ಬಿಜೆಪಿ ಮುಖಂಡರಿಗೆಕೃತಜ್ಞತೆ:‘ಸೂಡಾ’ ಅಧ್ಯಕ್ಷ ಗಾದಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಜಿಲ್ಲೆಯ ಬಿಜೆಪಿಮುಖಂಡರಿಗೆಕೃತಜ್ಞತೆಸಲ್ಲಿಸಿದರು.

ಪ್ರೆಸ್ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ನಾಗರಾಜ್ ನೇರಿಗೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.