ತೀರ್ಥಹಳ್ಳಿ: ‘ಅಡಿಕೆ ಎಲೆಚುಕ್ಕಿ ರೋಗ ಹಿಂದಿನಿಂದಲೂ ಇದೆ. ಆದರೆ, ಈಗ ಮರವನ್ನು ಕೊಲ್ಲುವಷ್ಟು ಶಕ್ತಿಯುತವಾಗಿ ಬೆಳೆದಿದೆ. ಸಾಮೂಹಿಕವಾಗಿ ಔಷಧ ಸಿಂಪಡಿಸುವ ಮೂಲಕ ರೋಗವನ್ನು ನಿಯಂತ್ರಿಸಲು ಸಾಧ್ಯವಿದೆ’ ಎಂದು ಶಾಸಕ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.

ಗುರುವಾರ ದೇವಂಗಿ ಮಾನಪ್ಪ ಸಭಾ ಭವನದಲ್ಲಿ ತೋಟಕಾರಿಕೆ ಇಲಾಖೆ ಆಯೋಜಿಸಿದ್ದ ‘ಅಡಿಕೆ ಬೆಳೆಯಲ್ಲಿ ಎಲೆಚುಕ್ಕಿ ರೋಗದ ನಿಯಂತ್ರಣ’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಮರಗಳು ರೋಗ ನಿರೋಧಕ ಶಕ್ತಿ ಕಳೆದುಕೊಳ್ಳುತ್ತಿವೆ. ₹50,000 ಧಾರಣೆ ಇದ್ದಾಗಲೂ ರೈತರಿಗೆ ನೆಮ್ಮದಿಯ ನಿದ್ದೆ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹಳದಿ ರೋಗ ನಿಧಾನವಾಗಿ ಹರಡುತ್ತಿತ್ತು. ಆದರೆ, ಈಗ ಎಲೆಚುಕ್ಕಿ ರೋಗ ಗಾಳಿಯಲ್ಲಿ ಹರಡುತ್ತಿದೆ. 50 ಕ್ವಿಂಟಲ್ ಅಡಿಕೆ ಬೆಳೆಯುವ ರೈತರು 3 ಕ್ವಿಂಟಲ್ಗೆ ಇಳಿದಿದ್ದಾರೆ. ಈಚೆಗೆ 6 ಎಕೆರೆ ಬಾಗಾಯ್ತು ಹೊಂದಿರುವ ಸಂಪೆಕಟ್ಟೆಯ ರೈತರೊಬ್ಬರು ಮಧ್ಯರಾತ್ರಿ ಫೋನ್ ಮಾಡಿ ನನಗೆ ಬಿಪಿಎಲ್ ಕಾರ್ಡ್ ಕೊಡಿಸಿ ಎಂದು ಹೇಳಿದ್ದರು. ಸಾಲಗಾರರ ಒತ್ತಡ ತಡೆಯಲು ರೈತರಿಗೆ ಆಗುತ್ತಿಲ್ಲ’ ಎಂದು ಹೇಳಿದರು.

‘ಲಕ್ಷಾಂತರ ಪರೋಪಕಾರಿ ಸೂಕ್ಷ್ಮಾಣು ಜೀವಿಗಳಿಗೆ ಕೊಟ್ಟಿಗೆ ಗೊಬ್ಬರ ಬಳಕೆಯಿಂದ ಅನುಕೂಲವಾಗಲಿದೆ. ಎನ್ಪಿಕೆ ಮಾದರಿಯ ಕೆಲವು ರಾಸಾಯನಿಕ ಗೊಬ್ಬರ ಬಳಸಿದರೆ ಭೂಮಿಯ ಆರೋಗ್ಯ ಕಾಪಾಡಲು ಸಾಧ್ಯವಿಲ್ಲ. ಕೊಟ್ಟಿಗೆ ಗೊಬ್ಬರ ಇಲ್ಲದಿದ್ದರೆ ಹಸಿರೆಲೆ ಗೊಬ್ಬರ ಬಳಕೆ ಮಾಡಬಹುದು. ಮಣ್ಣಿನ ಗುಣಮಟ್ಟ ಇದರಿಂದ ಸುಧಾರಿಸುತ್ತದೆ’ ಎಂದು ಶಿವಮೊಗ್ಗ ಕೃಷಿ ಮಹಾವಿದ್ಯಾಲಯದ ಸಸ್ಯರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಬಿ. ಗಂಗಾಧರ ನಾಯ್ಕ ಹೇಳಿದರು.

‘ನದಿ, ಕೆರೆ, ತೊರೆ ಮುಂತಾದ ನೀರಿನ ಮೂಲವಿರುವ ತೋಟಗಳಲ್ಲಿ ಹೆಚ್ಚಾಗಿ ಅಡಿಕೆ ರೋಗಗಳು ಕಾಣಿಸಿಕೊಂಡಿವೆ. ರೋಗ ಬಾಧಿತ ಅಡಿಕೆ ಎಲೆ ಸುಡುವುದು ಅತ್ಯಂತ ಪರಿಣಾಮಕಾರಿ ವಿಧಾನ. ಅಡಿಕೆ ವಿಸ್ತರಣೆಯಾಗುತ್ತಿದ್ದರೂ ಮಲೆನಾಡು, ಕರಾವಳಿ ಭಾಗದಲ್ಲಿ ಮಾತ್ರ ಉಳಿದುಕೊಳ್ಳುವ ಸಾಧ್ಯತೆ ಇದೆ. ಬಸಿಗಾಲುವೆ ಮಾಡುವುದು, ಗರಿಷ್ಠ 25 ಲೀಟರ್ ನೀರು ಕೊಡುವ ಪದ್ಧತಿಯಿಂದ ರೈತರು ನಷ್ಟವನ್ನು ಕಡಿಮೆ ಮಾಡಬಹುದು. ಹೆಚ್ಚು ನೀರು ಕೊಡುವುದು ಕೂಡ ಹಾನಿಗೆ ಕಾರಣವಾಗಬಹುದು’ ಎಂದು ಗಂಗಾಧರ ನಾಯ್ಕ ಅಭಿಪ್ರಾಯಪಟ್ಟರು.

‘ಅಡಿಕೆ ಈ ಭಾಗದಲ್ಲಿ ಮುಖ್ಯ ಬೆಳೆಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಗುಂಬೆ ಹೋಬಳಿಯಲ್ಲಿ ಶೇ 80, ಮತ್ತೂರು ಶೇ 60ರಷ್ಟು ಬೆಳೆಗೆ ಹಾನಿಯಾಗಿದೆ. ಎಲೆಚುಕ್ಕಿ ಹಾನಿಯ ಕುರಿತಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ರಾಸಾಯನಿಕ ಗೊಬ್ಬರದ ಜೊತೆಗೆ ಈ ಬಾರಿ ಜೈವಿಕ ಗೊಬ್ಬರ ವಿತರಿಸಿದ್ದೇವೆ’ ಎಂದು ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಸೋಮಶೇಖರ್ ಕೆ. ತಿಳಿಸಿದರು.

ಸಭೆಯಲ್ಲಿ ದೇವಂಗಿ ಎಫ್ಪಿಒ ಅಧ್ಯಕ್ಷ ಎಚ್.ಎಂ.ರವೀಂದ್ರ, ಶೇಡ್ಗಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ್, ಗ್ರಾಮ ಪಂಚಾಯಿತಿ ಸದಸ್ಯರಾದ ಮಹೇಶ್, ಅಶೋಕ್, ಸರೋಜ, ಎಫ್ಪಿಒ ನಿರ್ದೇಶಕರಾದ ಉಮೇಶ್, ಪೂರ್ಣೇಶ್ ಎಚ್.ಎಂ, ಜಯರಾಂ ಕೆ.ಆರ್, ಪ್ರಮುಖರಾದ ಡಿ.ಎಂ.ಮನುದೇವ್, ಸೀಬಿನಕೆರೆ ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ರವಿರಾಜ್ ಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.