ಶಿವಮೊಗ್ಗ: ಕರ್ನಾಟಕ ಆರ್ಯವೈಶ್ಯ ಮಹಾಸಭಾ ವತಿಯಿಂದ ಭಾನುವಾರ ನಗರದಲ್ಲಿ ಜಿಲ್ಲಾ ಮಟ್ಟದ ಆರ್ಯವೈಶ್ಯ ಸಮ್ಮೇಳನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಆರ್.ಪಿ.ರವಿಶಂಕರ್, ಮಹಾಸಭಾದಲ್ಲಿ ಲಭ್ಯವಿರುವ ಯೋಜನೆಗಳ ಬಳಕೆ ಮಾಡಿಕೊಂಡು ಆರ್ಥಿಕವಾಗಿ ಬೆಳೆಯುವಂತೆ ಸಮುದಾಯದವರಿಗೆ ಕಿವಿಮಾತು ಹೇಳಿದರು.

ಮಹಾಸಭಾದಿಂದ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ಸಮಾಜದ ಬಡ ವಿದ್ಯಾರ್ಥಿಗೆ ಮಾಸಿಕ ₹1,000 ನೆರವು ನೀಡುವ ವಿದ್ಯಾನಿಧಿ, ಶೇ 75ರಷ್ಟು ಅಂಗವೈಕಲ್ಯ ಹೊಂದಿರುವವರಿಗೆ ಜೀವನ ಪರ್ಯಂತ ಮಾಸಿಕ ₹1,000 ಕೊಡುವ ವಾಸವಿ ಚೇತನ, ಸದಸ್ಯರು ಸಾವಿಗೀಡಾದರೆ ₹5 ಲಕ್ಷ ಸಹಾಯಧನ ಕೊಡುವ ಅಮರಜ್ಯೋತಿ ಯೋಜನೆಗಳ ಬಗ್ಗೆ ರವಿಶಂಕರ್ ಮಾಹಿತಿ ನೀಡಿದರು.

ವಾಸವಿ ಸಮಾಜದ ಸದಸ್ಯರಿಗೆ ನೆರವಾಗಲು ಮಹಾಸಭಾದಿಂದ ವಿದ್ಯಾರ್ಥಿ ಮಿತ್ರ ಹೆಸರಿನ ಸಾಲ ಯೋಜನೆ, ವಾರ್ಷಿಕ ₹1.25 ಕೋಟಿ ಅನುದಾನದಲ್ಲಿ ಲ್ಯಾಪ್ಟಾಪ್ ಕೊಡುವ ಯೋಜನೆ, ವಾಸವಿ ದೇವಾಲಯ ವೀಕ್ಷಣೆಗೆ ಪೋರ್ಟಲ್, ಮಹಾಸಭೆಯ ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಮನೆ ಮನೆಗೆ ತಲುಪಿಸುವ ಸಂಪರ್ಕ ವಾಹಿನಿ, ವೈಶ್ಯ ಹಾಸ್ಟೆಲ್, ವಾಸವಿ ಗೋಶಾಲೆ, ಸಂಧ್ಯಾಶ್ರೀ ಯೋಜನೆಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.

ಸಮುದಾಯದಲ್ಲಿ ಐಎಎಸ್, ಕೆಎಎಸ್ ಓದುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ತರಬೇತಿಗೆ ಶೈಕ್ಷಣಿಕ ಕೇಂದ್ರ ತೆರೆಯಲಾಗಿದೆ. ವಾಸವಿ ಪೀಠದ ಪುನರುತ್ಥಾನಕ್ಕಾಗಿ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರ ಪೀಠಾರೋಹಣ ಆಗಿದೆ. ಎಸ್ಎಸ್ಎಲ್ಸಿಯಿಂದ ಸ್ನಾತಕೋತ್ತರ ಪದವಿವರೆಗೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 65 ವರ್ಷ ಪೂರೈಸಿದ ಸಮುದಾಯದ ವಿಧವೆಯರಿಗೆ ಮಾಸಿಕ ₹1,500 ಕೊಡುವ ಸಂಧ್ಯಾಶ್ರೀ ಯೋಜನೆ ರೂಪಿಸಲಾಗಿದೆ ಎಂದು ಸಮಾಜದ ಪಕ್ಷಿನೋಟ ನೀಡಿದ ಅವರು, ಒಟ್ಟಾರೆ ಸಮುದಾಯದ ಸಂಪೂರ್ಣ ಹಿತಕ್ಕೆ ಮಹಾಸಭಾ ಬದ್ಧವಾಗಿದೆ ಎಂದು ಹೇಳಿದರು.

ಆರ್ಯವೈಶ್ಯ ಸಮುದಾಯದವರು ಹಿಂದಿನಿಂದಲೂ ವ್ಯಾಪಾರ ಕ್ಷೇತ್ರದಲ್ಲಿ ಇದ್ದು, ಬೇರೆಯವರಿಗೆ ಉದ್ಯೋಗ ನೀಡುತ್ತಿದ್ದರು. ಇಂದು ಅವರೇ ಬೇರೆಯವರ ಬಳಿ ಉದ್ಯೋಗ ಕೇಳುವಂತಾಗಿದೆ. ಇದು ಬದಲಾಗಬೇಕು. ಹಿಂದಿನ ವೈಭವ ಮತ್ತೆ ಬರಬೇಕು. ಆ ದಿಸೆಯಲ್ಲಿ ಎಲ್ಲರೂ ಯೋಚಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್, ಮಾಜಿ ಸಚಿವ ಡಿ.ಎಚ್.ಶಂಕರಮೂರ್ತಿ, ಆರ್ಯವೈಶ್ಯ ವಾಸವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಟಿ.ಆರ್.ಅಶ್ವತ್ಥ ನಾರಾಯಣಶೆಟ್ಟಿ, ಆರ್ಯವೈಶ್ಯ ಮಹಾಜನ ಸಮಿತಿ ಅಧ್ಯಕ್ಷ ಎಸ್.ಕೆ.ಶೇಷಾಚಲ, ಮಹಾಸಭಾ ವಿಭಾಗೀಯ ಉಪಾಧ್ಯಕ್ಷ ಬಿ.ಎಸ್.ನಟರಾಜ್, ಕಾರ್ಯದರ್ಶಿ ಕೆ.ವಿ.ಪ್ರಸನ್ನಕುಮಾರ್, ಕಾರ್ಯಕಾರಿ ಸಮಿತಿಯ ಎಂ.ಜೆ.ಮಂಜುನಾಥ್, ಡಿ.ಎಂ.ಅರವಿಂದ್, ಕಾರ್ಯದರ್ಶಿ ಸುಪ್ರಿಯಾ ಚೇತನ್ ಪಾಲ್ಗೊಂಡಿದ್ದರು. ಮಹಾಸಭಾ ಜಿಲ್ಲಾ ಸಮಿತಿ ಅಧ್ಯಕ್ಷ ಭೂಪಾಳಂ ಎಸ್.ಶಶಿಧರ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ತಾಲ್ಲೂಕುಗಳಿಂದ ಬಂದ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.