ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ವಾಕಿಂಗ್ ಮಾಡುತ್ತಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ

Published 28 ಫೆಬ್ರುವರಿ 2024, 4:24 IST
Last Updated 28 ಫೆಬ್ರುವರಿ 2024, 4:24 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ಶಾಂತವೇರಿ ಗೋಪಾಲ ಗೌಡ ಬಡಾವಣೆಯ (ಗೋಪಾಳ) 'ಎಫ್' ಬ್ಲಾಕ್‌ನ ಡಿವಿಜಿ ಪಾರ್ಕ್ ಬಳಿ ಬುಧವಾರ ಬೆಳಿಗ್ಗೆ ಕರಡಿ ಬಂದಿದೆ. ವಾಕಿಂಗ್‌ಗೆ ತೆರಳಿದ್ದ ತುಕಾರಾಮ ಶೆಟ್ಟಿ ಎಂಬುವವರ ಮೇಲೆ ದಾಳಿ ಮಾಡಿದೆ.

ನಾಯಿಗಳ ಹಿಂಡು ಕರಡಿಯನ್ನು ಬೆನ್ನತ್ತಿಕೊಂಡು ಬಂದಿದ್ದು ಅದು ಎದುರಿಗೆ ಬರುತ್ತಿದ್ದ ತುಕಾರಾಮ ಅವರ ಮೇಮೇಲೆ ಎಗರಿ ಹೊಟ್ಟೆಗೆ ಪರಚಿದೆ.

ಪಕ್ಕದ ಪುರದಾಳು ಭಾಗದ ಶೆಟ್ಟಿಹಳ್ಳಿ ಅಭಯಾರಣ್ಯ ಭಾಗದಿಂದ ಕರಡಿ ಬಂದಿರಬಹುದು ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಬಂದಿರುವ ಅರಣ್ಯ ಇಲಾಖೆ ಸಿಬ್ಬಂದಿ ಕರಡಿ ಹಿಡಿಯಲು ಕಾರ್ಯಾಚರಣೆ ನಡೆಸಿದ್ದಾರೆ. ಸ್ಥಳದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT